ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿಲ್ಲಾ ಉಪ ನಿರ್ದೇಶಕರಿಂದ ಗೌರವಯುತ ಭೇಟಿ: ವಿದ್ಯಾರ್ಥಿನಿಯರಿಗೆ ಪ್ರೇರಣೆ
ಆಲಮೆಲ, (ಆಗಸ್ಟ್ 25): ಇಲ್ಲಿನ ವಿಭೂತಿಹಳ್ಳಿಯ ಕಿತ್ತೂರ ರಾಣಿ ವಸತಿ ಶಾಲೆಗೆ ಮಾನ್ಯ ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ಮಹೇಶ್ ಪೂದ್ದಾರ್ ಸಾಹೇಬರು ಇಂದು ಸಾಯಂಕಾಲ ಗೌರವಯುತವಾಗಿ ಭೇಟಿ ನೀಡಿ, ವಿದ್ಯಾರ್ಥಿನಿಯರ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಅವರ ಜೊತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಯಾದ ಶ್ರೀಮತಿ ಭವಾನಿ ಪಾಟೀಲ್ ಮೇಡಂ ಸಹ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾನ್ಯ ಸಾಹೇಬರು ವಿದ್ಯಾರ್ಥಿನಿಯರೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿದರು. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ವಿಶೇಷವಾಗಿ, ವಿದ್ಯಾರ್ಥಿನಿಯರ ಮನೋಬಲ ಹೆಚ್ಚಿಸಲು ಮತ್ತು ಹೋರಾಟದ ನೋಭಾವವನ್ನು ಬೆಳೆಸಲು, ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ವರಚಿತ ಹಾಡುಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಮಕ್ಕಳಿಗೆ ಸ್ಫೂರ್ತಿ ತುಂಬಿದರು. ಶಿಕ್ಷಣದ ಮಹತ್ವ, ಪರಿಶ್ರಮ ಮತ್ತು ಸಮಾಜ ಸೇವೆಯ ಮೌಲ್ಯಗಳ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡಿದರು.
ಶಿಕ್ಷಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಬದ್ಧತೆ, ಹೊಣೆಗಾರಿಕೆ ಮತ್ತು ನೈತಿಕ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು. ಶಾಲೆಯ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಸಲಹೆಗಳನ್ನು ನೀಡಿದರು. ಭೇಟಿಯ ಕೊನೆಯಲ್ಲಿ, ಮಕ್ಕಳು ಊಟ ಮಾಡುವಾಗ ಅವರೊಂದಿಗೆ ಸಮಯ ಕಳೆದು, ಶುಚಿ-ರುಚಿಯಾದ ಆಹಾರದ ಮಹತ್ವವನ್ನು ತಿಳಿಸಿದರು ಮತ್ತು ಗುಣಮಟ್ಟದ ಆಹಾರ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಈ ಸ್ಮರಣೀಯ ಭೇಟಿಯಿಂದ ಶಾಲೆಯ ವಿದ್ಯಾರ್ಥಿನಿಯರಿಗೆ ಹೊಸ ಚೈತನ್ಯ ಮತ್ತು ಪ್ರೇರಣೆ ದೊರೆತಿದೆ ಎಂದು ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಪಾಟೀಲ್ ತಿಳಿಸಿದ್ದಾರೆ. ಶಾಲೆಯ ಪರವಾಗಿ ಮಾನ್ಯ ಜಿಲ್ಲಾ ಉಪ ನಿರ್ದೇಶಕರಿಗೆ ಗೌರವಪೂರ್ವಕವಾಗಿ ಸನ್ಮಾನಿಲಾಯಿತು ಈ ಸಂದರ್ಭದಲ್ಲಿ ಕನ್ನಡ ಶಿಕ್ಷಕ ದರೆಪ್ಪ ಬಿರಾದಾರ್, ರಾಜ್ಯ ಸಂಪನ್ಮೂಲ ಶಿಕ್ಷಕ ಬಸವರಾಜ ಭೂತಿ, ವಿಜ್ಞಾನ ಶಿಕ್ಷಕ ಎಂ.ಎ.ಪಿರ್ಜಾದೆ ಗಣಿತ ಶಿಕ್ಷಕಿಯರಾದ ಶ್ರೀಮತಿ ಎಸ್ ಎ ಶೇಕ್, ದೈಹಿಕ ಶಿಕ್ಷಕರಾದ ಈಶ್ವರಪ್ಪ ಬಿರಾದಾರ್ ಕಂಪ್ಯೂಟರ್ ಶಿಕ್ಷಕರಾದ ಶ್ರೀನಾಥ್ ನಾಯ್ಕೋಡಿ, ಶುಶ್ರೂಷಾಧಿಕಾರಿ ಶ್ರೀಮತಿ ಸುನಿತಾ ಗೆರ್ಡೇ, ಚಿತ್ರಕಲಾ ಶಿಕ್ಷಕಿ ಜ್ಯೋತಿ ದುರ್ಗಾ ನಿಲಯ ಪಾಲಕಿಯರಾದ ಶ್ರೀಮತಿ ಮಾಲತಿ ತಡಲಗಿ, ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಗಂಗೂಬಾಯಿ ಸೇರಿದಂತೆ ಹಲವು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
Comments
Post a Comment