ಸರ್ವರಿಗೂ ದೀಪಾವಳಿ ಹಬ್ಬದ ಹಾಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು



ವಿಮೋಚನೆ...!

ಬಾಣೆಲೆಯಲಿ ಅರಳು ಹುರಿದಂತೆ

ಸಿಡಿದ ದೀಪಾವಳಿ ಪಟಾಕೆಯಂತೆ..!


ಚಟ-ಪಟನೆ ಸಿಡಿದವು ಜೀವ ಹೆಕ್ಕಿ

ಸೇರಿದವು  ಕರೋನಾ ಪ್ರಾಣ ತೆಕ್ಕಿ..!!


ವೈದ್ಯ, ಆರಕ್ಷಕ, ಯೋಧ, ತೇದ ತ್ರಾಣ

ತಾನು ಸವೆದು, ಬೆಳಕ ಕೊಟ್ಟ ಮೇಣ..!

ಕರೋನಾಸುರನ ಬಿರುಸು ಬಾಣ

ಎದೆ ಹೊಕ್ಕು ತೆಗೆದವೇಷ್ಟು ಪ್ರಾಣ?


ಜಗದಲಿ ನಿಲ್ಲದ ಮನುಜನ ಓಟ

ಪ್ರಕೃತಿಯೆ ಅವನಿಗೆ ಕಲಿಸಿತು ಪಾಠ...!

ತುಂಬಕೊ ಮನದಲಿ ಪ್ರೀತಿ ಮಮತೆ

ಸದಾ ಉರಿಯುವಂತೆ ಭಾತ್ರುತ್ವ ಹಣತೆ..!!


ವರುಷ ಕಳೆದರು ಹರುಷವಿಲ್ಲ

ಜೀವ ತೇದರು ಕರುಣೆಯಿಲ್ಲ ..!

ಸಾಕು ಸಾಕು ಇನ್ನೆಷ್ಟು ಕೊಡುವೆ ಯಾತನೆ 

ನೀಗು ಈ ಗೃಹಬಂಧನದಿಂದ  ವಿಮೋಚನೆ..!!

*******************************

ರಚನೆ: ಬಸವರಾಜ ಭೂತಿ



ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು





Comments