|
|
||||||||||||||||||||||||||||||||||||||||||||||||
ಕಾಶ್ಮೀರಿ ಸೇಬುಹಣ್ಣು ಕನ್ನಡದಲ್ಲಿ ಸಾರಾಂಶ:
ಈ ಕಥೆಯಲ್ಲಿ ಲೇಖಕರು ಮಾರುಕಟ್ಟೆಯಲ್ಲಿ ಆಗುವ ಮೋಸದ ಬಗ್ಗೆ ತಿಳಿಸಿ
ಗ್ರಾಹಕರು ಜಾಗರೂಕರಾಗಿರು ವಂತೆ ಕರೆ ನೀಡಿದ್ದಾರೆ.
ಲೇಖಕರು ಕೆಲ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋಗುತ್ತಾರೆ.
ಅಂಗಡಿಯಲ್ಲಿ ಒಳ್ಳಯ ಬಣ್ಣದ ಸೇಬನ್ನು ನೋಡಿ ಕೊಳ್ಳುವ ಮನಸ್ಸಾಗುತ್ತದೆ. ಇತ್ತೀಚೆಗೆ ಜನರಿಗೆ
ಆರೋಗ್ಯದ ಬಗ್ಗೆ ಬಹಳ ಕಾಳಜಿ. ಮೊದಲಿಗೆ ಟೊಮೆಟೋವನ್ನು ಬಳಸುತ್ತಿರಲಿಲ್ಲ. ಈಗ ಅದಕ್ಕೆ ಪ್ರಾಶಸ್ಯ
ಸಿಕ್ಕಿದೆ. ಮೊದಲಿಗೆ ಕ್ಯಾರೆಟ್ ಬಡವರ
ಆಹಾರವಾಗಿತ್ತು. ಈಗ ಸಿರಿವಂತರಿಗೆ ಮೀಸಲು. ಇದನ್ನೆಲ್ಲಾ ಯೋಚಿಸಿ ಲೇಖಕರು ಪೌಷ್ಠಿಕ ಆಹಾರವಾದ
ಸೇಬನ್ನು ಖರೀದಿಸಲು ನಿರ್ಧರಿಸುತ್ತಾರೆ. ಅಂಗಡಿಯವನು ಕಾಶ್ಮೀರದ ಸ್ವಾದಿಷ್ಟ ಸೇಬು ಬಂದಿದೆ
ಕೊಳ್ಳಿರೆಂದು ಹೇಳಿದ. ಲೇಖಕರು ತಮ್ಮ ಕೈಚಾರವನ್ನು ಕೊಟ್ಟು ಸೇಬುಹಣ್ಣನ್ನು ಕಟ್ಟಲು ಹೇಳಿದರು. ಬೆಳಗಿನ ಜಾವ ಉಪಹಾರಕ್ಕಾಗಿ ಸೇಬುಹಣ್ಣನ್ನು ತಿನ್ನಲು ತೆಗೆದಾಗ ಒಂದು
ಹಣ್ಣು ಕೊಳೆತುಹೋಗಿತ್ತು. ಒಂದೂ ಕೊಳೆತಿತ್ತು. ಅಂಗಡಿಯವನು ಮೋಸ ಮಾಡಿದ ಎನಿಸಿತು. ಮೂರನೇ ಹಣ್ಣು
ಕೊಳೆಯದಿದ್ದರೂ ಮೆತ್ತಗಾಗಿತ್ತು. ನಾಲ್ಕನೆಯದೂ ತಿನ್ನಲು ಯೋಗ್ಯವಿರಲಿಲ್ಲ. ಲೇಖಕರಿಗೆ ದುಡ್ಡಿನ ಬಗ್ಗೆ ಚಿಂತೆಯಿಲ್ಲ. ಅಂಗಡಿಯವನು ಮಾಡಿದ ಮೋಸದ ಬಗ್ಗೆ ಬೇಸರ, ಆದರೆ ಮೋಸದಲ್ಲಿ ಲೇಖಕರ ಪಾತ್ರವೂ ಇತ್ತು. ಹಣ್ಣುಗಳನ್ನು ನೀಡಿ ಖರೀದಿಸಬೇಕಿತ್ತು. ಅವಕಾಶ ಸಿಕ್ಕರೆ ಮೋಸ ಮಾಡುತ್ತಾರೆ. ಆದರೆ ಅವಕಾಶ ಕೊಡುವುದು ನಾವೇ ತಾನೇ, ಹಿಂದೆ ಹೀಗಿರಲಿಲ್ಲ. ಪ್ರಾಮಾಣಿಕತೆ ಇತ್ತು. ಹೆಚ್ಚಿಗೆ ದುಡ್ಡು ಕೊಟ್ಟಿದ್ದರೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು. ಆದುದರಿಂದ ಗ್ರಾಹಕರು ಜಾಗರೂಕತೆಯಿಂದ ಇರಬೇಕು. ಇಲ್ಲದಿದ್ದರೆ ನನ್ನಂತೆ ಮೋಸ ಹೋಗಬೇಕಾದೀತು ಎನ್ನುತ್ತಾರೆ ಲೇಖಕರು. |
Comments
Post a Comment