ಶಿಕ್ಷಕ ಸೇವೆಗೆ ಸೇರಿ ಇಂದಿಗೆ ಹತ್ತು ವರುಷ
ನನ್ನ ಸ್ಮೃತಿ ಪಟಲದಲ್ಲಿದಂತೆ ೨೦೧೧ ಇಸ್ವಿ ಡಿಸೆಂಬರ ತಿಂಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಿತ್ತು. ನಾನಾಗ ಸುಣಗಾರ ಪಿಯು ಕಾಲೇಜನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಹಾಗೂ ಆಲಮೇಲನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ.
ಅಂದು ಫಲಿತಾಂಶದ ಸುದ್ದಿ ತಿಳಿದ ಕ್ಷಣ ಮಧ್ಯಾಹ್ನನೆ ಶಾಲೆ ಬಿಟ್ಟು ಆಲಮೆಲದಿಂದ ಸಿಂದಗಿಗೆ ದೌಡಾಯಿಸಿ ಬಂದೆ. ದಾರಿ ಮಧ್ಯ ಮನಸ್ಸಿಗೆ ಕಸಿವಿಸಿ ಅನಸತಿತ್ತು. ರಿಸಲ್ಟ್ ನೋಡುವ ಕೌತುಕ ಹೆಚ್ಚಾಗಿತ್ತು. ಎನಾದಿತು ಎನ್ನುವ ಭಯ ಆತಂಕ ಮನದಲ್ಲಿ ವiನೆಮಾಡಿತ್ತು.
ಹೇಗೋ… ಎನೋ ನಾನು ಆಯ್ಕೆಯಾದ ವಿಷಯ ಊರಲೆಲ್ಲ ನನಗಿಂತಲು ಮೋದಲೆ ಹಬ್ಬಿತ್ತು. ಸ್ನೇಹಿತರೆಲ್ಲ ಬರುತ್ತಲೆ ಶುಭಾಶಯ ತಿಳಿಸಲಾಬಿಸಿದರು. ನನಗೆ ಗೊತ್ತಿರದೆ ನಾನು ಕೆಟಗೆರಿ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದೆ.
ತಾತ್ಕಾಲಿಕ ಆಯ್ಕೆ ಪಟ್ಟಿಯಾದ್ದರಿಂದ ಅಂತಿಮ ಆಯ್ಕೆ ಪಟ್ಟಿ ಬರುವರೆಗೂ ಹೆಚ್ಚಿಗೆ ಖುಷಿ ಪಡುವದು ಬೇಡವೆಂದು ಸುಮ್ಮನಾದೆ. ಎಕೆಂದರೆ ಈ ಮುಂಚೆಯು ಒಂದು ಭಾರಿ ೨೦೦೮ ರಲ್ಲಿ ಹತ್ತಿರಕ್ಕೆ ಬಂದು ಆಯ್ಕೆ ಪಟ್ಟಿಯಿಂದ. ಹೊರಬಿದ್ದಿದ್ದೆ. ಆದರು ಒಳಗೊಳಗೆ ಖುಷಿ. ಎನೋ ಸಾದಿಸಿದ ತೇಜೆಸ್ಸು ಮುಖದಲ್ಲಿ.
ಕೆಲವೆ ತಿಂಗಳಗಳಲ್ಲೆ ಅಂತಿಮ ಆಯ್ಕೆ ಪಟ್ಟಿಯು ಹೊರಬಿತ್ತು. ಮೊದಲಿನಗಿಂತಲೂ ಎರಡು ಸ್ಥಾನ ಮೆಲೇರಿ ಶಿಕ್ಷಕನಾಗುವ ಕನಸು ಗಟ್ಟಿಗೊಳಸಿತ್ತು. ಆಗ ಮನಸಿಗಾದ ಖುಷಿ ಅಷ್ಟಿಷ್ಟಲ್ಲ.
ಕಲಿಯುವ ವಯಸ್ಸಿನಲ್ಲಿ ಕಿತ್ತು ತಿನ್ನುವ ಬಡತನ. ಇದರ ಮದ್ಯ ಹೊಟ್ಟೆ ಹೊರೆಯುವ ಸವಾಲು. ಹೀಗಾಗಿ ಶಾಲೆಗೆ ಹೋಗಿದ್ದಕಿಂತಲು ಹೆಚ್ಚಾಗಿ ಗಾರೆ ಕೆಲಸ, ಹೋಟೆಲ ಕೆಲಸ, ಬೆಳಗ್ಗೆ ಹಾಲು, ಪೇಪರ್ ಅದು ಇದು ಸಿಕ್ಕ ಕೆಲಸ ಮಾಡಿದ್ದೆ ಹೆಚ್ಚು.
ಕಲಿಯುವ ಇಚ್ಚೇ ಹುಟ್ಟಿದ್ದೆ ಡಿಗ್ರಿ ನಂತರ. ಹಾಗೊ.... ಹೀಗೊ ಮಾಡಿ ಬಿ.ಇಡಿ ಪದವಿ ಕೂಡಾ ಮುಗಿಸಿದೆ. ಆಗಲೆ ನನಗೆ ಓದುವ ಹಂಬಲ ಹೆಚ್ಚಿದ್ದು ಸರಕಾರಿ ಕೆಲಸಾ ಪಡದೆ ತೀರಬೇಕು ಪಣತೋಟ್ಟು ಹಗಲು ರಾತ್ರಿ ಶ್ರಮಪಟ್ಟು ಓದಿದ್ದೆ. ಈ ಸಲ ನೇಮಕವಾಗುವ ಬರವಸೆಯು ಮೊದಲೆ ಇತ್ತು. ಹೀಗಾಗಿ ಖುಷಿಪಡದೆ ಇನ್ನೇನು ಮಾಡಲಿ.
೦೩.೦೬.೨೦೧೨ ರಂದು ದೇವರಾಜ ಅರಸು ಭವನ ಬೆಂಗಳೂರಲ್ಲಿ ಸ್ಥಳ ನಿಯುಕ್ತಿಯು ನಡೆಯಿತು. ನನ್ನ ರ‍್ಯಾಂಕಿಂಗ ಕಡಿಮೆಯಿತ್ತು. ಉತ್ತರ ಕರ್ನಾಟಕದಲ್ಲೇಲ್ಲು ಖಾಲಿ ಸ್ಥಳ ಸಿಗದ ಕಾರಣ ಅನಿವರ‍್ಯವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳ ನಿಯುಕ್ತಿ ಮಾಡಿಸಿಕೊಂಡೆ. ಸಿಂಧುತ್ವ ಮಾಡಿಸಿಕೊಂಡು ನೇಮಕಾತಿ ಆದೇಶ ಪಡೆದು ಸೇವೆಗೆ ಇದೇ ತಿಂಗಳು ಜುಲೈ ೨೦. ೨೦೧೨ ಕರ್ತವ್ಯಕ್ಕೆ ಹಾಜರಾದೆ. ಇದು ನನ್ನ ಜೀವನದ ಪುಟದಲ್ಲಿ ಸುವರ್ಣಾಕ್ಷರಗಳಲಿ ಬರೆದಿಟ್ಟ ದಿನ. ಹಾಲು, ಪೇಪರ್ ಹಂಚುತಿದ್ದ ಹುಡುಗ ಸಮಾಜದಲ್ಲಿ ಗೌರವಿತ ಸ್ಥಾನವಾದ ಶಿಕ್ಷಕನಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನ.
ದುರಾದೃಷ್ಟವಶ ನಾನು ಮೊದಲು ಅನ್ನಕೊಟ್ಟ ಶಾಲೆಯಲ್ಲಿ ಬಹಳ ದಿನಗಳಲ್ಲ, ನಿಮಿಷಗಳು ಉಳಿಯಲಾಗಲಿಲ್ಲ. ಕಾರಣ ಆ ಶಾಲೆಯಲ್ಲಿ ಅತಿಥಿ ಶಿಕ್ಷಕರಾದವರು ಕೋರ್ಟ ಸ್ಟೇ ತಂದಿದ್ದರು.
ಆ ಶಾಲೆಯಲ್ಲಿ ತಡೆಯಾಜ್ಞೆ ಇದ್ದರಿಂದ ಕರ್ತವ್ಯಕ್ಕೆ ಹಾಜರಾದ ಕೆಲವೆ ನಿಮಿಷಗಳಲ್ಲಿ ಆ ಶಾಲೆಯಿಂದ ಬಿಡುಗಡೆಯ ಭಾಗ್ಯ ಪಡೇದ ಮಾಹಾನುಭಾವ ನಾನೆ ಅನಿಸುತ್ತೆ.
ಮಂಡ್ಯ ಜಿಲ್ಲೆಯಂತಹ ಗೊತ್ತಿರದ ಊರಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿ ಹೋಗಿ. ಅಧಿಕಾರಿಗಳ ಹತ್ತಿರ ಆವಲತ್ತು ಮೇಲುಕೋಟೆ ಮೋರಾರ್ಜಿ ಶಾಲೆಗೆ ನಿಯೋಜಿಸಿಕೊಂಡೆ. ಆ ಶಾಲೆಯಲ್ಲಿ ಎಲ್ಲರು ಹೊಸಬರು, ಯುವಕರು ಹೆಚ್ಚು ಉತ್ತರ ಕರ್ನಾಟಕದವರೆ ಆಗಿದ್ದರಿಂದ ಬೇಗನೆ ಹೊಂದಿಕೊಂಡೆ. ಪ್ರಾಂಶುಪಾಲರಾದ ಕು. ಶಿಲ್ಪಾ ಮೇಡಂ ಅವರು ಹಿಡಿದು ಎಲ್ಲರು ಯುವ ಉತ್ಸಾಹಿಗಳೆ ಆದರಿಂದ ಶಾಲೆಯು ಸರಾಗವಾಗಿಯೆ ನಡೇದಿತ್ತು.
ಆ ಭಾಂದವ್ಯ ಬಹಳ ದಿನ ಉಳಿಯಲಿಲ್ಲ. ಬರೀ ೧೯ ದಿನಗಳಿಗೆ ಮಿಸಲಾಗಿತ್ತು. ಅಲ್ಲಿನ ಶಿಕ್ಷಕರು ಮತ್ತು ಮಕ್ಕಳೊಂದಿಗಿನ ಒಡನಾಟ ನನ್ನನು ಭಾವನಾತ್ಮಕವಾಗಿ ಮಾಡಿತು. ಮತ್ತೆ ನನಗೆ ಅಲ್ಲಿಂದ ಬಿಡುಗಡೆ ಭಾಗ್ಯ ಸಿಕ್ಕಿತು. ತಡೆಯಾಜ್ಞೆ ಇರುವ ಶಾಲೆಗಳ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನು ಸಾಮೂಹಿಕವಾಗಿ ಬಿಡುಗಡೆಗೊಳಿಸಿ ಕೇಂದ್ರ ಕಛೇರಿ ವರದಿ ಮಾಡಿಕೊಳ್ಳುವಂತೆ ಮೇಲಾಧಿಕರಿಗಳ ಆದೇಶವಿತ್ತು. ಕಾರಣ ಆ ಶಾಲೆ ಇಂದಲು ಬಿಡುಗಡೆಯಾದೆ.
ಕೆಲವೆ ದಿನಗಳಲ್ಲಿ÷ ನನ್ನನ್ನ ತುಂಬಾ ಹಚ್ಚಿಕೊಂಡಿದ್ದ ಮಕ್ಕಳು ನನ್ನ ಬಿಡುಗಡೆಂiÀi ಸುದ್ದಿ ತಿಳಿದು ತೆಕ್ಕೆಗೆ ಬಿದ್ದು ಅಳತೊಡಗಿದರು. ನನಗೂ ದುಖ ತಡೆಯಲಾಗಲಿಲ್ಲ ಕಣ್ಣಿರು ಕಟ್ಟೆಯೊಡೆಯಿತು. ನನ್ನ ಜೀವನದಲ್ಲಿ ಬಹಳಷ್ಟು ದು:ಖ ತರಿಸಿದ ಮೊದಲ ಕಹಿ ಅನುಭವ ಆದು. ಭಾರವಾದ ಮನಸ್ಸಿಂದಲೆ ಬಂದು ಕೇಂದ್ರ ಕಚೇರಿಗೆ ವರದಿ ಮಾಡಿಕೊಂಡೆ. ರಾಜ್ಯದಲ್ಲೆಲ್ಲೂ ಹಿಂದಿ ಹುದ್ದೆ ಖಾಲಿ ಇರದ ಕಾರಣ ಮರು ಸ್ಥಳ ನಿಯುಕ್ತಿಯಾಗುವರೆಗೆ ಬೆಂಗಳೂರಿನಲ್ಲೆ ಉಳಿಯಕಾಯಿತು. ನನ್ನಂತೆ ನೂರಾರು ನೊಂದ ಶಿಕ್ಷಕರು ಹೆಚ್ಚುವರಿಯಾಗಿ ಮರು ಸ್ಥಳನಿಯುಕ್ತಿಗಾಗಿ ಕೇಂದ್ರ ಕಚೇರಿ ಮುಂದೆ ದಿನಾ ಅಲೆದಾಡುತಿದ್ದರು. ಆಗಿನ್ನು ಸಂಬಳವು ಆಗಿರಲಿಲ್ಲ, ಹತ್ತಿರ ಬಿಡಿಗಾಸು ಇರಲ್ಲಿ. ತಂದ ದುಡ್ಡೆಲ್ಲ ಖಾಲಿಯಾಗಿ ಊರಿಗೆ ಹೊಗೋಕು ಆಗದೆ ಅಲ್ಲೆ ಇರಾಕು ಆಗದೆ ಪರದಾಡುವ ಪರಿಸ್ಥತಿ ಎದುರಾಯಿತು.
ಆಗಿನ ಮಾನ್ಯ ಇ.ಡಿ ಸರ್ ಮನವಲಿಸಿ ಕ್ರೆöÊಸ ಆಪೀಸ್‌ನಲ್ಲೆ ತಾತ್ಕಾಲಿಕವಾಗಿ ಕೆಲಸವು ಗಿಟ್ಟಿಸಿಕೊಂಡೆ. ಅಲ್ಲಿಯೇ ಕೆಲಸ ಮಾಡುತಿದ್ದರಿಂದ ಅದು ನನಗೆ ವರವಾಯಿತು. ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಶಾಂತಪ್ಪ ಸರ್ ಅವರು ನಮ್ಮ ಸ್ಥಿತಿ ಅರಿತು ಎಲ್ಲಿಯಾದರೂ ಯಾವುದೇ ಹುದ್ದೆ ಖಾಲಿಯಿದ್ದರೆ ಹುಡುಕೊಂಡು ಬನ್ನಿ ಹಾಕಿ ಕೊಡುವೆಯಂದಿದ್ದರು. ಅದೃಷ್ಟಕ್ಕೆ ಸ್ನೇಹಿತರೊಬ್ಬರು ಶಿಕ್ಷಣ ಇಲಾಖೆಯಿಂದ ಬಿಡುಗಡೆಯಾದೆ ಉಳಿದಿದ್ದ ನಿಲಯಪಾಲಕರ ಹುದ್ದೆ ಬಸವನ ಬಾಗೇವಾಡಿಯ ಕೊಲಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಖಾಲಿಯಿತ್ತು. ನಿಲಯಪಾಲಕನಾಗಿ ಅಗಷ್ಟ 14. 2012 ರಂದು ನಿಯೋಜಿಸಿಕೊಂಡು ಬಂದು ಹಾಜರಾದೆ.
ನಿಯೋಜನೆಯ ಮೆರೆಗೆ ನಿಲಪಾಲಕನಾಗಿ ವರದಿ ಮಾಡಿಕೊಳ್ಳಲು ಬಂದಾಗ ಮೂಲಭೂತ ಸೌಕರ್ಯವಿರದೆ ನಲುಗಿದ ಶಿಥಿಲಾವಸ್ಥೆಯ ಬಾಡಿಗೆ ಕಟ್ಟಡ ನೋಡಿ ಭಯ ಆತಂಕವಾಯಿತು. ಅನಿವರ‍್ಯವಾಗಿ ಕೆಲಸ ಆರಂಬಿಸಿದೆ. ಆ ಶಾಲೆಯಲ್ಲಿ ಕೋರ್ಟ ಆದೇಶದ ಮೆರೆಗೆ ಮುಂದುವರೆದಿದ್ದ ಪ್ರಾಂಶುಪಾಲರು ಕರ್ತವ್ಯ ನಿರ್ವಹಿಸುತಿದ್ದರಿಂದ ತಾಲೂಕಾ ಅಧಿಕಾರಿಗಳೆ ಆ ಶಾಲೆಗೆ ಪ್ರಾಂಶುಪಾಲರಾಗಿ ಪ್ರಭಾರ ವಹಿಸಿದ್ದರು. ವಾರ್ಡನರಾಗಿ ಸಮಾಜ ಕಲ್ಯಾಣ ಇಲಾಖೆಯ ನಿಲಯಪಾಲಕರನ್ನೆ ನಿಯೋಜಿಸಲಾಗಿತ್ತು. ಹೀಗಾಗಿ ಅಲ್ಲಿಯು ಕೂಡಾ ಹಲವು ಸಮಸ್ಯ ಎದುರಿಸಬೇಕಾಯಿತು. ನಂತರ ಪ್ರಾಂಶುಪಾಲರು ಮತ್ತು ನಿಲಯಪಾಲಕರು ಬದಲಾದರು. ಪಕ್ಕದ ಮೋರಾರ್ಜಿ ಶಾಲೆಯ ಪ್ರಾಂಶುಪಾಲರಾದ ಚಲವಾದಿ ಸರ್ ಅವರು ವಹಿಸಿಕೊಡಾಗ ಪರೀಸ್ಥಿತಿ ಹತೊಟಿಗೆ ಬಂದು ಸರಾಗವಾಗಿ ನೆಯಿತು ಅನ್ನುವಷ್ಟರಲ್ಲೆ ಮರುವಿನ್ಯಾಸವೆಂಬ ಹೆಸರಿನಲ್ಲಿ ಮತ್ತೊಂದು ಬಿರುಗಾಳಿ ಬಿಸಿತು.
ಮತ್ತೆ ನನ್ನ ಮರುವಿನ್ಯಾಸದ ಹೆಸರಲ್ಲಿ ಮಂಡ್ಯ ಜಿಲ್ಲೆಗೆ ನಿಲಯಪಾಲಕನಾಗಿ ನಿಯೋಜಿಸಲಾಗಿತ್ತು. ಮೆಲಾಧಿಕಾರಿಗಳ ಗಮನಕ್ಕೆ ತಂದು ಮತ್ತೆ ಅದೇ ಸ್ಥಳದಲ್ಲೆ ಮುಂದುವರೆದೆ. ಅಷ್ಟೊತ್ತಿಗೆ ಶಹಾಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಿಂದಿ ಹುದ್ದೆ ಖಾಲಿಯಾಗಿದ್ದು ತಿಳಿದು. ಸ್ನೇಹಿತರೊಬ್ಬರ ಸಹಾಯದಿಂದ ಈ ಶಾಲೆಯ ನನ್ನ ಮೂಲ ಹುದ್ದೆಗೆ ಅಗಸ್ಟ 14. 2013 ರಂದು ವರ್ಗಾಯಿಸಿಕೊಂಡು ಬಂದೆ. ಮರು ದಿನವೆ ಸ್ವಾತಂತ್ರö್ಯ ದಿನಾಚರಣೆ ನನಗು ಸ್ವಾತಂತ್ರö್ಯ ಸಿಕ್ಕ ಅನುಭವ. ಕೆವಲ ಒಂದೆ ವರ್ಷದಲ್ಲಿ ಎನೆಲ್ಲ ನಡೆದು ಹೋದವು.
ನಿಜ ಹೇಳಬೇಕು ಅಂದ್ರೆ ಇಷ್ಟು ದಿನದ ಈ ಶಿಕ್ಷಕ ವೃತ್ತಿ ಸಾಕಷ್ಟು ತೃಪ್ತಿ ತಂದಿದೆ. ನನ್ನ ಸೇವಾವಧಿಯಲ್ಲಿ ಹಲವು ಏರಿಳಿತಗಳು ಕಂಡರು ವೃತ್ತಿ ನಿಷ್ಠನಾಗಿ ಬೋಧನೆಗೆ ಮೋಸ ಮಾಡದೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದೆನೆಂಬ ಆತ್ಮಭಿಮಾನ ನನ್ನಲ್ಲಿದೆ. ಶಾಲೆಗಾಗಿ, ಮಕ್ಕಳ ಶ್ರೇಯೋಭಿವೃದ್ದಿಗಾಗಿ ದುಡಿಯುವ ಹುಮ್ಮಸ್ಸಿದೆ. ಈ ಶಾಲೆಯಿಂದ, ಮಕ್ಕಳಿಂದ, ವೃತ್ತಿ ಮಿತ್ರರಿಂದ, ಕಲಿತಿದ್ದು ಸಾಕಷ್ಟಿದೆ. ಇನ್ನು ಕಲಿಬೇಕಾದದ್ದು ಬೇಕಾದಷ್ಟಿದೆ.
ನಾಳೆ ಅಗಸ್ಟ ತಿಂಗಳು ಬಂದರೆ ಈ ಶಾಲೆಗೆ ಬಂದು 11 ವರ್ಷಗಳು ತುಂಬುವವು. ಈ ಜಿಲ್ಲೆ ನನಗ್ಯಾವುದು ಕೊರತೆ ಮಾಡಿಲ್ಲ ಒಬ್ಬ ಉತ್ತಮ ಶಿಕ್ಷಕನಾಗಿ ಗುರುತಿಸಿ ಪುರಸ್ಕರಿಸಿದೆ, ನನ್ನನೊಬ್ಬ ಕವಿ, ಸಾಹಿತಿಯಾಗಿ ಮಾಡಿ ಅನೇಕ ವೇದಿಕೆಗಳ ಮೇಲೆ ಸತ್ಕರಿಸಿ ಸನ್ಮಾನಿಸಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಗೌರವಿಸಿದೆ. ಪ್ರತಿ ವಿಷಯದಲ್ಲೂ ನನ್ನ ಶಾಲೆ. ನನ್ನ ಮಕ್ಕಳು ನಮ್ಮ ಪ್ರಾಂಶುಪಾಲರು ಶಿಕ್ಷಕರೂ ನನ್ನ ಜೊತೆಗಿದ್ದಾರೆ. ಈ ನಮ್ಮ ಕ್ರೈಸ್ ಸಂಸ್ಥೆಯು ನನ್ನನ್ನ ಆರ್.ಆಯ್.ಇ ಮೂಲಕ ತರಬೇತಿ ನೀಡಿ ರಾಜ್ಯ ಹಿಂದಿ ವಿಷಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡಿ. ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಲರ್ನಿಂಗ್ ಪ್ಯಾಕೆಜ್, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಕೆ, ಹೀಗೆ ಸಂಘದ ಅನೇಕ ಕಾರ್ಯಗಳಲ್ಲಿ ನನ್ನನ್ನ ಒಬ್ಬ ಸದಸ್ಯನಾಗಿ ಗುರುತಿಸಿದೆ. ಸೆಟಲೈಟ ಮೂಲಕ ಡಿ.ಎಸ್.ಈ.ಆರ್.ಟಿ ಸ್ಟುಡಿಯೋದಲ್ಲಿ ಟೆಲಿ ಕಾಂಪ್ರೆನ್ಸ್ ಮೂಲಕ ತರಬೇತಿ ನೀಡಿಲು ಅವಕಾಶ ಮಾಡಿಕೊಟ್ಟಿದೆ.
ಆದರಂತೆ ಕರ್ನಾಟಕ ರಾಜ್ಯ ಕರ್ನಾಟಕ ವಸತಿ ಶಿಕ್ಷಣ ವಸತಿ ಶಾಲೆಗಳ ನೌಕರರ ಸಂಘವು ನನ್ನನ್ನ ಗುರುತಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಾಡಿ ಜವಾಬ್ದಾರಿ ಕೊಟ್ಟಿದೆ. ಇವೆಲ್ಲವುಗಳಿಗೆ ನಾನು ಎಷ್ಟರ ಮಟ್ಟಿಗೆ ನ್ಯಾಯ ಒದಿಸಿದ್ದೆನೋ ನನಗೆ ಗೊತ್ತಿಲ್ಲ, ಇಷ್ಟು ಮಾತ್ರ ಸತ್ಯ ಕಾಯಾ, ವಛಾ, ಮನಸಾ ನಾನು ಯಾವತ್ತಿಗೂ ಕರ್ತವ್ಯ ಮಾಡಲು ಸಿದ್ದ ಎಂದು ಹೇಳಬಲ್ಲೆ.
ಇವತ್ತಗೆ ನಾನು 11 ವರ್ಷಗಳು ಕಳೆದು 12 ವರ್ಷದಲ್ಲಿ ಕಾಲಿಡುತ್ತಿರುವ ಸಂದರ್ಭದಲ್ಲಿ ನನಗೆ ಇ ಒಂದು ಸಂಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಆತ್ಮತೃಪ್ತಿಯ ಮಧ್ಯೆಯು ಸಾಕಷ್ಟು ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ೧೧ ವರ್ಷ ಮುಗಿಸಿದ ಸಂದರ್ಭದಲ್ಲಿ ಮನಸ್ಸಿಗೆ ಸಂತೋಷವಾಗಿದ್ದು. ನನ್ನಿಂದ ತಿಳದೊ ತಿಳಿಯದನೊ ತಪ್ಪಾಗಿರಬಹುದು ಆ ತಪ್ಪು ಗಳನೆಲ್ಲ ಮನ್ನಿಸಿ ಸದಾ ನನ್ನ ಏಳಿಗೆ ಬಯಸುತಾ ಜೋತೆ ನಿಂತ ನನ್ನ ತಂದೆ-ತಾಯಿಯರಿಗೆ, ಸದಾ ಲ್ಯಾಪ್ ಟಾಪ್ ಮೋಬೈಲಿಗೆ ಅಂಟಿಕೊಂಡೆ ಇರುವ ನನ್ನ ಇಲ್ಲಿಯವರೆಗೂ ಸಹಿಸಿಕೊಂಡು ನನ್ನ ಪ್ರತಿ ಕಾರ್ಯದಲ್ಲು ನನ್ನ ಜೊತೆ ಬೆನ್ನೆಲುಬಾಗಿ ನಿಂತ ನನ್ನ ಮಡದಿ ರಾಜೇಶ್ವರಿಗೆ, ನನ್ನ ಮುದ್ದು ಮಕ್ಕಳಿಗೆ. ಆತ್ಮೀಯ ಸ್ನೇಹಿತರಿಗೆ, ಈ ಸಮಯದಲ್ಲಿ ಕೃತಜ್ಞತೆಗಳನ್ನು ಸಲ್ಲಿಸದೆ ಇರಲಾರೆನು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ೧೨ ವರ್ಷದ ಈ ಸುದಿರ್ಘ ಪ್ರಯಣದಲ್ಲಿ ಸಹಕರಿಸಿದ ಕ್ರೈಸ್ ಸಂಸ್ಥೆಯ ಎಲ್ಲಾ ಮಿತ್ರ ವೃಂಧವನ್ನು ಈ ಸಮಯದಲ್ಲಿ ನೆನೆಯದೆ ಇರಲಾರೆನು.
ನನಗೆ ಅನ್ನಕೊಟ್ಟು ಸುಂದರ ಬದುಕು ಕಟ್ಟಿಕೊಳ್ಳಲು ಕಾರಣವಾಗಿ ನೆಮ್ಮದಿ ಬದುಕಿಗೆ ಮುನ್ನುಡಿ ಬರೆದ ಈ ನನ್ನ ಹೆಮ್ಮೆಯ ಏಖಇIS ಸಂಸ್ಥೆಗೆ ಯಾವಾಗಲು ಚಿರ ಋಣಿಯಾಗಿರುವೆ.
ಇಂತಿ ನಿಮ್ಮವ
■ ಬಸವರಾಜ ಭೂತಿ. ಹಿಂದಿ ಭಾಷಾ ಶಿಕ್ಷಕರು
Karnataka Residential Educational Institutions Society
Comments
Post a Comment