ಶಿಕ್ಷಕ ಸೇವೆಗೆ ಸೇರಿ ಇಂದಿಗೆ 12 ವರುಷ

 ಶಿಕ್ಷಕ ಸೇವೆಗೆ ಸೇರಿ ಇಂದಿಗೆ ಹನ್ನೆರಡು ವರುಷ 

ನನ್ನ ಸ್ಮೃತಿ ಪಟಲದಲ್ಲಿದಂತೆ 2011 ಇಸ್ವಿ ಡಿಸೆಂಬರ ತಿಂಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೇಮಕಾತಿಯ ತಾತ್ಕಾಲಿಕ ಆಯ್ಕೆ  ಪಟ್ಟಿ ಪ್ರಕಟಗೊಂಡಿತ್ತು. ನಾನಾಗ ಸುಣಗಾರ ಪಿಯು ಕಾಲೇಜನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ  ಹಾಗೂ ಆಲಮೇಲನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ.

ಅಂದು ಫಲಿತಾಂಶದ ಸುದ್ದಿ ಕೇಳಿ, ಅಂದು  ಮಧ್ಯಾಹ್ನ ಶಾಲೆ(ಆಲಮೆಲ)ಯಿಂದ ಸಿಂದಗಿಗೆ ದೌಡಾಯಿಸಿ ಹೊರಟು ನಿಂತೆ.  ದಾರಿ ಮಧ್ಯ ಮಧ್ಯ ಮನಸ್ಸಿಗೆ  ಕಸಿವಿಸಿ ಅನಸಿದರು. ರಿಸಲ್ಟ್ ನೋಡುವ ಕೌತುಕ ಹೆಚ್ಚಾಗಿತ್ತು. ಎನಾದಿತು ಎನ್ನುವ ಭಯದಲ್ಲಿದ್ದ ನನಗೆ ಊರಿಗೆ ಬರುವಷ್ಟರಲ್ಲಿ ನನಗೆ ಶುಭ ಸುದ್ದಿಯೇ ಬರಮಾಡಿತು.   ಹೇಗೋ… ಎನೋ ನಾನರಿಯೆ ಆಯ್ಕೆಯಾದ ಸುದ್ದಿ ಊರತುಂಬಾ ಹಬ್ಬಿತ್ತು. ಸ್ನೇಹಿತರೆಲ್ಲರು ಬರುತ್ತಲೆ ಶುಭಾಶಯ ತಿಳಿಸಲಾರಂಬಿಸಿದರು. ನನಗೆ ಗೊತ್ತಿರದೆ ನಾನು ಕೆಟಗೆರಿ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದೆ. ಈ ವಿಷಯ ಮೊದಲು ನನ್ನ ತಂದೆ ತಾಯಿಗೆ ತಿಳಿಸಬೇಕು ಅಂದುಕೊಂಡೆ. ಆದರೆ ಅವರು ಮನೆಯಲ್ಲಿ ಇರಲಿಲ್ಲ ದೂರದ ಮಹಾರಾಷ್ಟ್ರಕ್ಕೆ ದುಡಿಯಲೆಂದು ಹೋಗಿದ್ದರು. ಇವಾಗಿನ ಹಾಗೆ ಆಗ ಎಲ್ಲರಲ್ಲೂ ಮೋಬೈಲ್ ಹೆಚ್ಚು  ಇರಲಿಲ್ಲ ಹೀಗಾಗಿ ಅವರಿಗೆ ಸುದ್ದಿ ತಿಳಿಯಲು ತಡವಾಯಿತು. . 

 

ತಾತ್ಕಾಲಿಕ ಆಯ್ಕೆ ಪಟ್ಟಿಯಾದ್ದರಿಂದ ಅಂತಿಮ ಆಯ್ಕೆ ಪಟ್ಟಿ ಬರುವರೆಗೂ ಹೆಚ್ಚಿಗೆ ಖುಷಿ ಪಡುವದು ಬೇಡವೆಂದು ಸುಮ್ಮನಾದೆ. ಎಕೆಂದರೆ ಈ ಮುಂಚೆಯು ಒಂದು ಭಾರಿ 2008 ರಲ್ಲಿ ಹತ್ತಿರಕ್ಕೆ ಬಂದು ಆಯ್ಕೆ ಪಟ್ಟಿಯಿಂದ. ಹೊರಬಿದ್ದಿದ್ದೆ. ಆದರು ಒಳಗೊಳಗೆ ಖುಷಿ. ಎನೋ ಸಾದಿಸಿದ ತೇಜೆಸ್ಸು ಮುಖದಲ್ಲಿತ್ತು.

ಕಲಿಯುವ ವಯಸ್ಸಿನಲ್ಲಿ ಕಿತ್ತು ತಿನ್ನುವ ಬಡತನ. ಇದರ ಮದ್ಯ ಹೊಟ್ಟೆ ಹೊರೆಯುವ ಸವಾಲು. ಹೀಗಾಗಿ ಶಾಲೆಗೆ ಹೋಗಿದ್ದಕಿಂತಲು ಹೆಚ್ಚಾಗಿ ಗಾರೆ ಕೆಲಸ, ಹೋಟೆಲ ಕೆಲಸ, ಬೆಳಗ್ಗೆ ಹಾಲು, ಪೇಪರ್ ಅದು ಇದು ಅಂತ ಸಿಕ್ಕ ಸಿಕ್ಕ ಕೆಲಸ ಮಾಡಿದ್ದೆ ಹೆಚ್ಚು. 

ಕಲಿಯುವ ಇಚ್ಚೇ ಹುಟ್ಟಿದ್ದೆ ಡಿಗ್ರಿ ನಂತರ. ಹಾಗೊ.... ಹೀಗೊ ಮಾಡಿ ಬಿ.ಇಡಿ ಪದವಿ ಕೂಡಾ ಮುಗಿಸಿದ್ದೆ. ಆಗಲೆ ನನಗೆ ಓದುವ ಹಂಬಲ ಹೆಚ್ಚಾಗಿದ್ದಿದ್ದು. ಆಗ ಎಲ್ಲಾ ಸ್ನೇಹಿತರು ಡಿಗ್ರಿ ಮುಗಿಸಿ ರೂಮ್ ಹಿಡಿದುಕೊಂಡು ಓದುತ್ತಿದ್ದರು. ನಾನು ಬೆಳಗ್ಗೆ ಹಾಲು ಪೇಪರ್ ಹಂಚಿ ಅವರ ಜೊತೆ ಜಾಯಿನ್ ಆಗ್ತಿದೆ. ಸರಕಾರಿ ಕೆಲಸ ಗಿಟ್ಟಿಸುವ ಮಹಾದಾಸೆಗೆ ಹಗಲು ರಾತ್ರಿಯಲ್ಲ ಒದುತಿದ್ದೆ ಬೆಳಗ್ಗೆ ಪಾರ್ಟ್ ಟೈಮ್ ಶಿಕ್ಷಕನಾಗಿ ಕೆಲಸಕ್ಕೆ ಹೋಗ್ತಾ ಇದ್ದೆ. ನಾಪಟ್ಟ ಶ್ರಮಕ್ಕೆ ಕೊನೆಗೂ ಆ ದೇವರು ಕೈ ಬಿಡಲಿಲ್ಲ. ಒಂದು ಒಳ್ಳೆಯ ಹುದ್ದೆಯೇ ಕರುಣಿಸಿ ಬಿಟ್ಟ.

ನನಗೆ ಸರಕಾರಿ ನೌಕರಿ ಬಂದ ಸುದ್ದಿ ಕೇಳಿ ತಮ್ಮನೊಬ್ಬನನ್ನೇ ಅಲ್ಲೇ ಮಹಾರಾಷ್ಟ್ರದಯೆ ದುಡಿಯಲು ಬಿಟ್ಟು ನಮ್ಮ ತಂದೆ ತಾಯಿ ಇಬ್ನರೆ ಮರಳಿ ಬಂದರು. ಬಂದವಳೇ ನಮ್ಮವ್ವ ಸುಮ್ಮನೆ ಕೊಡಲಿಲ್ಲ ಬಂದು ಬಾಂಧವರಿಗೆಲ್ಲ ನನಗೆ ಸರ್ಕಾರಿ ನೌಕರಿ ಸಿಕ್ಕ ಸುದ್ದಿ ತಿಳಿಸುತ್ತಾ. ಕನ್ಯಾನ್ವೇಷಣೆಯಲ್ಲಿ ತೊಡಗಿದಳು. ಇನ್ನು ತಾತ್ಕಾಲಿಕ ಅಯ್ಕೆಪಟ್ಟಿಯಲ್ಲಿದ್ದ ನಾನು ಆತಂಕದಲ್ಲಿಯೆ ಅಂತಿಮ ಆಯ್ಕೆ ಪಟ್ಟಿಗಾಗಿ ಕಾಯುತ್ತಿದ್ದೆ.




ಮೊದಲೇ ಮನೆಯ ಪರಿಸ್ಥಿತಿ ಅರ್ತಿದ್ದ ನಾನು. ಮನೆಗೆ ಹೊಂದಿಕೊಂಡು ಹೋಗುವ ಬಡವರ ಮನೆಯ ಮಗಳಾಗಿದ್ದರು ಪರವಾಗಿಲ್ಲ. ಎಷ್ತೊ ಜನ ಸ್ನೇಹಿತರು ಈಗಲೇ ಮದುವೆ ಬೇಡ ಸ್ವಲ್ಪ ದಿನ ಕಾಯಿ ಎಂದು ತಿಳಿಸಿದರು ನಮ್ಮ ತಾಯಿಯಾಸಿಗೆ ತಣ್ಣೀರು ಎರಚುವುದು ಬೇಡವೆಂದು ಸುಮ್ಮನಾಗಿ, ಅವಳು ನೋಡಿದ ಹುಡುಗಿಯನ್ನೆ ಮದುವೆಯಾಗಬೇಕು ಎಂದು ನಿರ್ಧರಿಸಿದ್ದೆ.  ನಮ್ಮವ್ವ ತಡಮಾಡಲೆ ಇಲ್ಲ ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರ ಮಗಳನ್ನ ನೋಡಿ ನನಗೆ ಗಟ್ಟಿ ಮಾಡಿಯೇ ಬಿಟ್ಟಳು..
ಅಷ್ಟೊತ್ತಿಗೆ ಅಂತಿಮ ಆಯ್ಕೆ ಪಟ್ಟಿಯು ಹೊರಬಿತ್ತು. ಮೊದಲಿನಗಿಂತಲೂ ಎರಡು ಸ್ಥಾನ ಮೆಲೇರಿ ನಾನು ಶಿಕ್ಷಕನಾಗುವ ಕನಸು ಅದು ಗಟ್ಟಿಗೊಳಸಿತ್ತು. ಆಗ ಮನಸಿಗಾದ ಖುಷಿ ಅಷ್ಟಿಷ್ಟಲ್ಲ. ಆಗ ಎಲ್ಲರಿಗೂ ಕರೆ ಮಾಡಿ ತಿಳಿಸಿದೆ. ಭಾವಿ ಪತ್ನಿಗೆ  ನಿನ್ನ ಕಾಲ್ ಗುಣದಿಂದ ಎಂದು ಹೇಳಿ ಕಿಚಾಯಿಸಿದೆ.

 03.06.2012 ರಂದು ದೇವರಾಜ ಅರಸು ಭವನ ಬೆಂಗಳೂರಲ್ಲಿ ಸ್ಥಳ ನಿಯುಕ್ತಿಯು ನಡೆಯಿತು. ನನ್ನ ರ‍್ಯಾಂಕಿಂಗ ಕಡಿಮೆಯಿದ್ದ ಕಾರಣ ಕೌನ್ಸಿಲಿಂಗ್ ನಲ್ಲಿ ಉತ್ತರ ಕರ್ನಾಟಕದಲ್ಲಿದ್ದ ಎಲ್ಲಾ ಸ್ಥಾನಗಳು ತುಂಬಿ ಹೋದವು.  ಖಾಲಿ ಇದ್ದುದ್ದು ಮಾತ್ರ ದಕ್ಷಿಣ ಕರ್ನಾಟಕದಲ್ಲಿ. ಅನಿವರ‍್ಯವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳ ನಿಯುಕ್ತಿ ಮಾಡಿಸಿಕೊಂಡೆ. ಸುಸೂತ್ರವಾಗಿ ಸಿಂಧುತ್ವ ಮಾಡಿಸಿಕೊಂಡು ನೇಮಕಾತಿ ಆದೇಶ ಪಡೆದು. ನಾಗಮಂಗಲ ತಾಲೂಕಿನ ಸೋಮನಹಳ್ಳಿ ಮುರಾರ್ಜಿ ಶಾಲೆಗೆ ಇಂದಿಗೆ 12 ವರ್ಷಗಳ ಹಿಂದೆ ಜುಲೈ 20. 2012 ಕರ್ತವ್ಯಕ್ಕೆ ಹಾಜರಾದೆ. ಇದು ನನ್ನ ಜೀವನದ ಪುಟದಲ್ಲಿ ಸುವರ್ಣಾಕ್ಷರಗಳಲಿ ಬರೆದಿಟ್ಟ ದಿನ. ಹಾಲು, ಪೇಪರ್ ಹುಚುತ್ತಾ ದುದಿಯುತಿದ್ದ ಬಡವರ ಮಗ ಸಮಾಜದಲ್ಲಿ ಗೌರವಿತ ಸ್ಥಾನವಾದ ಶಿಕ್ಷಕನಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನ.

 ದುರಾದೃಷ್ಟವಶ ನನಗೆ ಮೊದಲು ಅನ್ನಕೊಟ್ಟ ಶಾಲೆಯಲ್ಲಿ ಬಹಳ ದಿನಗಳು ಉಳಿಯಲಾಗಲಿಲ್ಲ, ಅಲ್ಲಿ ಇದ್ದುದ್ದು ಮಾತ್ರ ನಿಮಿಷಗಳು. ಕಾರಣ ಆ ಶಾಲೆಯಲ್ಲಿ ಅತಿಥಿ ಶಿಕ್ಷಕರಾದವರು ಕೋರ್ಟ ಸ್ಟೇ ತಂದಿದ್ದರು. ತಡೆಯಾಜ್ಞೆ ಇದ್ದರಿಂದ ಕರ್ತವ್ಯಕ್ಕೆ ಹಾಜರಾದ ಕೆಲವೆ ನಿಮಿಷಗಳಲ್ಲಿ ಆ ಶಾಲೆಯಿಂದ ಬಿಡುಗಡೆಯ ಭಾಗ್ಯ ಪಡೇದ ಮಾಹಾನುಭಾವ ನಾನು. ಮಂಡ್ಯ ಜಿಲ್ಲೆಯಂತಹ ಗೊತ್ತಿರದ ಊರಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿ ಹೋಗಿ. ಅಧಿಕಾರಿಗಳ ಹತ್ತಿರ ಆವಲತ್ತುಕೊಂಡು ಮೇಲುಕೋಟೆಯ ಮೋರಾರ್ಜಿ ಶಾಲೆಗೆ ನಿಯೋಜಿಸಿಕೊಂಡು ಬಂದೆ. 

ಆ ಶಾಲೆಗೆ ಆಗ ತಾನೇ ಹೊಸದಾಗಿ ನೇಮಕವಾಗಿ ಬಂದು ನನ್ನಂತೆ ಎಲ್ಲರೂ ಜಾಯಿನ್ ಆಗ್ತಿದ್ರು, ಹೆಚ್ಚು ಉತ್ತರ ಕರ್ನಾಟಕದವರೆ ಆಗಿದ್ದರಿಂದ ಬೇಗನೆ ಹೊಂದಿಕೊಂಡೆ. ಪ್ರಾಂಶುಪಾಲರಾದ ಕು. ಶಿಲ್ಪಾ ಮೇಡಂ ಅವರು ಹಿಡಿದು ಎಲ್ಲರು ಯುವ ಉತ್ಸಾಹಿಗಳೆ ಆದರಿಂದ ಶಾಲೆಯು ಸರಾಗವಾಗಿಯೆ ನಡೇದಿತ್ತು.  


 ಈ ಭಾಂದವ್ಯ ಬಹಳ ದಿನಗಳು ಉಳಿಯಲಿಲ್ಲ. ಬರೀ 19 ದಿನಗಳಿಗೆ ಮಿಸಲಾಗಿತ್ತು. ಅಲ್ಲಿನ ಶಿಕ್ಷಕರು ಮತ್ತು ಮಕ್ಕಳೊಂದಿಗಿನ ಒಡನಾಟ ನನ್ನನು ಭಾವನಾತ್ಮಕನನ್ನಾಗಿ ಮಾಡಿತ್ತು. ನನಗೆ ಅಲ್ಲಿಯು ಬಿಡುಗಡೆ ಭಾಗ್ಯ ಒದಗಿ ಬಂತು. ತಡೆಯಾಜ್ಞೆ ಇರುವ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಶಕರನ್ನು  ಬಿಡುಗಡೆಗೊಳಿಸ ಕೇಂದ್ರ ಕಛೇರಿ ವರದಿ ಮಾಡಿಕೊಳ್ಳುವಂತೆ ಮೇಲಾಧಿಕರಿಗಳ ಆದೇಶವಿತ್ತು. 
ಎಲ್ಲರೂ ಯುವ ಉತ್ಸಾಹಿಗಳೆ ಆಗಿದ್ದರಿಂದ. ಮಕ್ಕಳನ್ನು ಹಚ್ಚಿಕೊಳ್ಳುವುದು ತಡವಾಗಲಿಲ್ಲ.  ಬೆರಳೆಣಿಕೆ ಎಷ್ಟೇ ದಿನಗಳಲ್ಲಿ ಮಕ್ಕಳು ನನ್ನನ್ನ ತುಂಬಾ ಹಚ್ಚಿಕೊಂಡಿದ್ದರು. ನನ್ನ ಬಿಡುಗಡೆಯ ಸುದ್ದಿ ತಿಳಿದು ದುಃಖಿಸುತ್ತ ತೆಕ್ಕೆಗೆ ಬಿದ್ದು ಅಳತೊಡಗಿದರು. 
ನನಗೂ ದುಖ ತಡೆಯದೆ ಕಣ್ಣಿರು ಕಟ್ಟೆಯೊಡೆಯಿತು. ನನ್ನ ಜೀವನದಲ್ಲಿ ಬಹಳಷ್ಟು ದು:ಖ ತರಿಸಿದ ಮೊದಲ ಕಹಿ ಅನುಭವ   ಆದು. ಭಾರವಾದ ಮನಸ್ಸಿಂದಲೆ ಟಾಟಾ ಬೈ ಬೈ ಮಾಡಿ. ಕೇಂದ್ರ ಕಚೇರಿಗೆ ಬಂದು ವರದಿ ಮಾಡಿಕೊಂಡೆ.  

 
  ಎಲ್ಲು ಹಿಂದಿ ಹುದ್ದೆ ಖಾಲಿ ಇರದ ಕಾರಣ ಮರು ಸ್ಥಳ ನಿಯುಕ್ತಿಯಾಗುವರೆಗೆ ಬೆಂಗಳೂರಿನಲ್ಲೆ ಉಳಿಯಕಾಯಿತು. ನನ್ನಂತೆ ನೂರಾರು ನೊಂದ ಶಿಕ್ಷಕರು ಹೆಚ್ಚುವರಿಯಾಗಿ ಮರು ಸ್ಥಳನಿಯುಕ್ತಿಗಾಗಿ ಕೇಂದ್ರ ಕಚೇರಿ ಮುಂದೆ ದಿನಾ ಅಲೆದಾಡುತಿದ್ದರು.


ಗಿನ್ನು ಸಂಬಳವು ಆಗಿರಲಿಲ್ಲ, ಊರಿಂದ ತಂದ ಒಂದಿಷ್ಟು ಹಣ ಆಗಲಿ ಕರಗಿ ಹೋಗಿತ್ತು.  ಊರಿಗೆ ಹೊಗೋಕು ಆಗದೆ ಅಲ್ಲೆ ಇರಾಕು ಆಗದೆ ಪರದಾಡಬೇಕಾಯಿತು. ಆಗಿನ ಮಾನ್ಯ ಇ.ಡಿ ಸರ್ ಮನವಲಿಸಿ KREIS ಆಪೀಸ್‌ನಲ್ಲೆ ತಾತ್ಕಾಲಿಕವಾಗಿ ಒಂದು ಕೆಲಸವು ಗಿಟ್ಟಿಸಿಕೊಂಡೆ. ಅಲ್ಲಿಯೇ ಕೆಲಸ ಮಾಡುತಿದ್ದರಿಂದ ಅದು ನನಗೆ ಅನುಕೂಲವು ಆಯಿತು. ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಶಾಂತಪ್ಪ ಸರ್ ಅವರು ನಮ್ಮ ಸ್ಥಿತಿ ಅರಿತು ನನ್ನ ಬಳಿ ಕರೆದು ಯಾವುದೇ ಹುದ್ದೆ ಖಾಲಿಯಿದ್ದರೆ ಹುಡುಕಿಕೊಂಡು ಬಾ ಹಾಕಿ ಕೊಡುವೆನೆಂದಿದ್ದರು. ಹೀಗಾಗಿ ಖಾಲಿ ಹುದ್ದೆಗಳ ಶೋಧನೆಯಲ್ಲಿ ತೊಡಗಿದೆ.

 ಅದೃಷ್ಟಕ್ಕೆ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿದ್ದ ನನ್ನ ಸ್ನೇಹಿತರೊಬ್ಬರು ನಮ್ಮ ಇಲಾಖೆಯಲ್ಲಿ ನಿಲಯ ಪಾಲಕರಾಗಿ ಆಯ್ಕೆಯಾಗಿದ್ದರು. ಅವರು ಶಿಕ್ಷಣ ಇಲಾಖೆಯಿಂದ ಬಿಡುಗಡೆಯಾಗಿ ಬರಲೇ ಇಲ್ಲ. ಹೀಗಾಗಿ ವಾರ್ಡನ್ ಹುದ್ದೆ ಖಾಲಿ ಉಳಿದಿತ್ತು.   ಬಸವನ ಬಾಗೇವಾಡಿಯ ಕೊಲಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ  ನಿಲಯಪಾಲಕನಾಗಿ ಅಗಷ್ಟ 14. 2012 ರಂದು  ನಿಯೋಜಿಸಿಕೊಂಡು ಬಂದು ಹಾಜರಾದೆ.

 ನಿಯೋಜನೆಯ ಮೆರೆಗೆ ನಿಲಪಾಲಕನಾಗಿ ವರದಿ ಮಾಡಿಕೊಳ್ಳಲು ಬಂದಾಗ ಮೂಲಭೂತ ಸೌಕರ್ಯವಿರದೆ ನಲುಗಿದ್ದ ಶಿಥಿಲಾವಸ್ಥೆಯ ಬಾಡಿಗೆ ಕಟ್ಟಡ ನೋಡಿ ಇಲ್ಲಿ ನೌಕರಿ ಮಾಡಬೇಕೆ ಅನ್ನುವ ಭಯ ಆತಂಕವಾಯಿತು. ಅನಿವಾರ್ಯವೂ ಇತ್ತು ಹೀಗಾಗಿ ಕೆಲಸ ಆರಂಬಿಸಿದೆ. 

ಈ ಶಾಲೆಯಲ್ಲಿ ಕೋರ್ಟ ಆದೇಶದ ಮೆರೆಗೆ ಮುಂದುವರೆದಿದ್ದ ಪ್ರಾಂಶುಪಾಲರು ಕರ್ತವ್ಯ ನಿರ್ವಹಿಸುತಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿಗಳೆ  ಪ್ರಾಂಶುಪಾಲರಾಗಿ ಪ್ರಭಾರ ವಹಿಸಿದ್ದರು. ವಾರ್ಡನರಾಗಿ ಸಮಾಜ ಕಲ್ಯಾಣ ಇಲಾಖೆಯ ನಿಲಯಪಾಲಕರನ್ನೆ ನಿಯೋಜಿಸಲಾಗಿತ್ತು. ಹೀಗಾಗಿ ಈ ಶಾಲೆಯಲ್ಲಿ ಹಲವು ಸಮಸ್ಯ ಎದುರಿಸಬೇಕಾಯಿತು. ನಂತರ ಪ್ರಾಂಶುಪಾಲರು ಮತ್ತು ನಿಲಯಪಾಲಕರು ಬದಲಾದರು. ಪಕ್ಕದ ಮೋರಾರ್ಜಿ ಶಾಲೆಯ ಪ್ರಾಂಶುಪಾಲರಾದ ಚಲವಾದಿ ಸರ್ ಅವರು ವಹಿಸಿಕೊಡಾಗ ಪರೀಸ್ಥಿತಿ ಹತೊಟಿಗೆ ಬಂದಿತ್ತು. 


 ಇನ್ನೇನು ಸರಾಗವಾಗಿ ನಡೆಯುತ್ತಿದೆ ಅನ್ನುವಷ್ಟರಲ್ಲೆ ಮರುವಿನ್ಯಾಸವೆಂಬ ಹೆಸರಿನಲ್ಲಿ ಮತ್ತೊಂದು ಬಿರುಗಾಳಿ ಬಿಸಿತು. ಮತ್ತೆ ನನ್ನ ಮರುವಿನ್ಯಾಸದ ಹೆಸರಲ್ಲಿ ಮಂಡ್ಯ ಜಿಲ್ಲೆಗೆ ನಿಲಯಪಾಲಕನಾಗಿ ನಿಯೋಜಿಸಲಾಗಿತ್ತು. ಮೆಲಾಧಿಕಾರಿಗಳ ಗಮನಕ್ಕೆ ತಂದು ಮತ್ತೆ ಅದೇ ಸ್ಥಳದಲ್ಲೆ ಮುಂದುವರೆದೆ. ಅಷ್ಟೊತ್ತಿಗೆ ಶಹಾಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಿಂದಿ ಹುದ್ದೆ  ಖಾಲಿಯಾಗಿದ್ದು ತಿಳಿದು. ಸ್ನೇಹಿತರೊಬ್ಬರ ಸಹಾಯದಿಂದ ಈ ಶಾಲೆಯ ನನ್ನ ಮೂಲ ಹುದ್ದೆಗೆ ಅಗಸ್ಟ 14. 2013 ರಂದು ವರ್ಗಾಯಿಸಿಕೊಂಡು ಬಂದೆ.


 ಮರು ದಿನವೆ ಸ್ವಾತಂತ್ರ್ಯ ದಿನಾಚರಣೆ ನನಗು ಆಗ ಸ್ವಾತಂತ್ರ್ಯ ಸಿಕ್ಕ ಅನುಭವ. ಕೆವಲ ಒಂದೆ ವರ್ಷದಲ್ಲಿ ಸೇವಾವಧಿಯಲ್ಲಿ ಇಷ್ಟೆಲ್ಲಾ ಏರಿಳಿತ ಕಂಡವನು ನಾನು.ಈ ಶಾಲೆಯಲ್ಲಿ ನೆಮ್ಮದಿಯ ನೆಟ್ಟುಸಿರು ಭಿಟ್ಟು ನಾಳೆ ಆಗಸ್ಟ್ ತಿಂಗಳಿಗೆ 11 ವರ್ಷ ಪೂರೈಸಲಿದ್ದೇನೆ.


ನಿಜ ಹೇಳಬೇಕು ಅಂದ್ರೆ ಇಷ್ಟು ದಿನದ ಈ ಶಿಕ್ಷಕ ವೃತ್ತಿ ಸಾಕಷ್ಟು ತೃಪ್ತಿ ತಂದಿದೆ. ನನ್ನ ಸೇವಾವಧಿಯಲ್ಲಿ ಹಲವು ಏರಿಳಿತಗಳು ಕಂಡಿದ್ದರು.  ವೃತ್ತಿ ನಿಷ್ಠನಾಗಿ ಬೋಧನೆಗೆ ಮೋಸ ಮಾಡದೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದೆನೆಂಬ ಆತ್ಮಭಿಮಾನ ನನ್ನಲ್ಲಿದೆ. ಶಾಲೆಗಾಗಿ, ಮಕ್ಕಳ ಶ್ರೇಯೋಭಿವೃದ್ದಿಗಾಗಿ ದುಡಿಯುತ್ತಿದ್ದೆನೆ. ಇನ್ನು ದುಡಿಯುವ ಹುಮ್ಮಸ್ಸಿದೆ. ಈ ಶಾಲೆಯಿಂದ, ಮಕ್ಕಳಿಂದ, ವೃತ್ತಿ ಮಿತ್ರರಿಂದ, ಸಾಕಷ್ಟು ಕಲಿತಿದ್ದೇನೆ. ಇನ್ನು ಕಲಿಬೇಕಾದದ್ದು ಬೇಕಾದಷ್ಟಿದೆ.

ಯದಗಿರಿ ಜಿಲ್ಲೆ ನನಗ್ಯಾವುದು ಕೊರತೆ ಮಾಡಿಲ್ಲ ಒಬ್ಬ ಉತ್ತಮ ಶಿಕ್ಷಕನಾಗಿ ಗುರುತಿಸಿ ಪುರಸ್ಕರಿಸಿದೆ. ನನ್ನನೊಬ್ಬ ಕವಿ, ಸಾಹಿತಿಯಾಗಿ ಮಾಡಿ ಅನೇಕ ವೇದಿಕೆಗಳ ಮೇಲೆ ಸತ್ಕರಿಸಿ ಸನ್ಮಾನಿಸಿದೆ. 


ಸಂಪನ್ಮೂಲ ವ್ಯಕ್ತಿಯಾಗಿ ಗೌರವಿಸಿದೆ. ಪ್ರತಿ ವಿಷಯದಲ್ಲೂ ನನ್ನ ಶಾಲೆ. ಪ್ರಾಂಶುಪಾಲರು ಶಿಕ್ಷಕರು ಮಕ್ಕಳು ನನ್ನ ಜೊತೆಗಿದ್ದಾರೆ.   ನಮ್ಮ KREIS ಸಂಸ್ಥೆಯು ನನ್ನನ್ನ ಆರ್.ಆಯ್.ಇ ಮೂಲಕ ತರಬೇತಿ ನೀಡಿ ರಾಜ್ಯ ಹಿಂದಿ ವಿಷಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡಿದೆ. ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ  ಲರ್ನಿಂಗ್, ಪಾಸಿಂಗ್ ಪ್ಯಾಕೆಜ್, ವಾರ್ಷಿಕ ಕ್ರಿಯಾಯೋಜನೆ, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಕೆ, ಸಂಘದ ಅನೇಕ ಕಾರ್ಯಗಳಲ್ಲಿ ನನ್ನನ್ನ ಒಬ್ಬ ಸದಸ್ಯನಾಗಿ ಕೆಲಸ ಮಾಡಿದ ಖುಷಿ ಇದೆ. ಸೆಟಲೈಟ ಮೂಲಕ ಡಿ.ಎಸ್.ಈ.ಆರ್.ಟಿ ಸ್ಟುಡಿಯೋದಲ್ಲಿ ಟೆಲಿ ಕಾಂಪ್ರೆನ್ಸ್ ಮೂಲಕ ತರಬೇತಿ ನೀಡಲು ನಮ್ಮ ಸಂಘ ಅವಕಾಶ ಮಾಡಿಕೊಟ್ಟಿದ್ದು ಸಂತಸ ತಂದಿದೆ. . 



ಕರ್ನಾಟಕ ರಾಜ್ಯ ಕರ್ನಾಟಕ ವಸತಿ ಶಿಕ್ಷಣ ವಸತಿ ಶಾಲೆಗಳ ನೌಕರರ ಸಂಘವು ನನ್ನನ್ನ ಗುರುತಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಾಡಿ  ಜವಾಬ್ದಾರಿ ಹೊರಸಿದೆ. ಇವೆಲ್ಲವುಗಳಿಗೆ ನಾನು ಎಷ್ಟರ ಮಟ್ಟಿಗೆ ನ್ಯಾಯ ಒದಿಸಿದ್ದೆನೋ.... ಒದಗಿಸುತ್ತಿದ್ದೇನೊ ನನಗೆ ಗೊತ್ತಿಲ್ಲ, ಇಷ್ಟು ಮಾತ್ರ ಸತ್ಯ ಕಾಯಾ, ವಛಾ, ಮನಸಾ ನಾನು ಯಾವತ್ತು  ಕರ್ತವ್ಯ ನಿರ್ವಹಿಸಲು ಸಿದ್ದ ಎಂದು ಹೇಳಬಲ್ಲೆ.


. ಇವತ್ತು ನನ್ನ ವೃತ್ತಿ ಬದುಕಿನಲ್ಲಿ 11 ವರ್ಷಗಳು ಕಳೆದು 12 ವರ್ಷದಲ್ಲಿ ಕಾಲಿಡುತ್ತಿರವ ಸುಸಂದರ್ಭ. ಈ KREIS ಸಂಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಆತ್ಮತೃಪ್ತಿಯ ಮಧ್ಯೆಯು ಸಾಕಷ್ಟು ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ 11 ವರ್ಷ ಮುಗಿಸಿದ ಸಂದರ್ಭದಲ್ಲಿ ಮನಸ್ಸಿಗೆ ಸಂತೋಷವಾಗಿದ್ದು.   ನನ್ನಿಂದಲು ತಿಳದೊ ತಿಳಿಯದನೊ  ತಪ್ಪಾಗಿರಬಹುದು ಆ ತಪ್ಪು ಗಳನೆಲ್ಲ ಮನ್ನಿಸಿ ಸದಾ ನನ್ನ ಏಳಿಗೆ ಬಯಸುತಾ ಜೋತೆ ನಿಂತ ನನ್ನ ತಂದೆ-ತಾಯಿಯರಿಗೆ, ಸದಾ ನಾನು ಲ್ಯಾಪ್ ಟಾಪ್ ಮೋಬೈಲಿಗೆ ಅಂಟಿಕೊಂಡೆ ಇರುವ ನನ್ನ ಇಲ್ಲಿಯವರೆಗೂ ಸಹಿಸಿಕೊಂಡು ನನ್ನ ಪ್ರತಿ ಕಾರ್ಯದಲ್ಲು ನನ್ನ ಜೊತೆ ಬೆನ್ನೆಲುಬಾಗಿ ನಿಂತ ನನ್ನ ಮಡದಿ ರಾಜೇಶ್ವರಿಗೆ, ನನ್ನ ಮುದ್ದು ಮಕ್ಕಳಿಗೆ. ಆತ್ಮೀಯ ಸ್ನೇಹಿತರಿಗೆ, ಈ ಸಮಯದಲ್ಲಿ ಕೃತಜ್ಞತೆಗಳನ್ನು ಸಲ್ಲಿಸದೆ ಇರಲಾರೆನು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ 12 ವರ್ಷದ ಈ ಸುದಿರ್ಘ ಪ್ರಯಣದಲ್ಲಿ ಸಹಕರಿಸಿದ ಸಂಸ್ಥೆಯ ಎಲ್ಲಾ ಮಿತ್ರ ವೃಂಧವನ್ನು ಈ ಸಮಯದಲ್ಲಿ ಧನ್ಯವಾದಗಳನ್ನು ತಿಳಿಸುತ್ತಾ.

ನಗೆ ಅನ್ನಕೊಟ್ಟು, ಸುಂದರ ಬದುಕು ಕಟ್ಟಿಕೊಳ್ಳು ಅನುಕೂಲ ಮಾಡಿ  ನೆಮ್ಮದಿ ಬದುಕಿಗೆ ಮುನ್ನುಡಿ ಬರೆದ ಈ ನನ್ನ  ಹೆಮ್ಮೆಯ ಕ್ರೈಸ್  ಸಂಸ್ಥೆಗೆ ಯಾವಾಗಲು ಚಿರ ಋಣಿಯಾಗಿರುವೆ. 

ಧನ್ಯವಾದಗಳೊಂದಿಗೆ,

ಇಂತಿ ನಿಮ್ಮವ

ಬಸವರಾಜ ಭೂತಿ. ಹಿಂದಿ ಭಾಷಾ ಶಿಕ್ಷಕರು
















Comments