Posts

Showing posts from April, 2023

ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ...

Image
           ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ... ತಂದೆ ತಾಯಿಯರ ಆಶಯದಂತೆ  ಐದನೇ ತರಗತಿಯಲ್ಲಿ ಇರುವಾಗಲೇ ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು. ಈ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ತಂದೆ-ತಾಯಿಯರ ವಾತ್ಸಲ್ಯದಲ್ಲಿ ಬೆಳೆಯುತಿದ್ದ ಮಕ್ಕಳಿಗೆ ಹಾಸ್ಟೆಲ್ನಲ್ಲಿ ಇರುವುದು ಸ್ವಲ್ಪ ಕಷ್ಟವಾಗದೆ ಇರಲಾರದು. ಶಾಲಾ ವಾತಾವರಣಕ್ಕೆ ಕೆಲ ಮಕ್ಕಳು ಬೇಗನೆ ಹೊಂದಿಕೊಂಡರೆ, ಇನ್ನು ಕೆಲ ಮಕ್ಕಳಿಗೆ ಸ್ವಲ್ಪ ಕಷ್ಟವಾಗರಬಹುದು. ಪ್ರಾಂಶುಪಾಲರು, ಶಿಕ್ಷಕರು, ನಿಲಯಪಾಲಕರು, ತೋರಿಸುವ ಪ್ರೀತಿ ಕಾಳಜಿಗೆ ಬರುಬರುತ್ತಾ ಅವರು ಹೊಂದಿಕೊಂಡು ಬಿಡುತ್ತಾರೆ..            ಹುಡುಗಾಟದ ಬುದ್ಧಿ, ತುಂಟಾಟ ಕುಚೇಷ್ಟೆ ಮಾಡೋ ವಯಸ್ಸು. ಇದರ ಮಧ್ಯೆ ಇವರನ್ನ ಸಂಭಾಳಿಸುವುದೇ ಶಿಕ್ಷಕರಾದ ನಮಗೆ ಒಂದು ದೊಡ್ಡ ಸರ್ಕಸ್. ಕ್ಲಾಸಿಗೆ ಕಾಲಿಟ್ಟರೆ ಸಾಕು, ಸರ್ ಆಕೀ ಹೊಡಿತಾಳ್ರಿ,  ಬೈತಾಳ್ರಿ, ಚಿವುಟ್ಯಾಳ್ರೀ, ಚುರ್ಯಾಳ್ರಿ, ಅಕೀ ಓದಿಲ್ರಿ, ಬರದಿಲ್ರಿ.  ಎಪ್ಪಾ ...! ಒಂದಾ, ಎರಡಾ,  ಇವರ ಪ್ರಲಾಪಗಳು.  ಎಲ್ಲವೂ ಸಂಬಳಿಸಿ  ಇನ್ನೇನು ಪಾಠ ಮಾಡಬೇಕು ಅನ್ನುವಷ್ಟರಲ್ಲಿ ಒಂದಿಬ್ಬರು ಬಂದೇ ಬಿಡೋರು ಸರ್ ಹೋಮ್ ವರ್ಕ್ ಚೆಕ್ ಮಾಡ್ರೀ, ಶುದ್ಧಬರ ಚೆಕ್ ಮಾಡ್ರೀ ಅಂತ. ನಾಳೆ ಮಾಡೋಣ ಅಂದ್ರು ಕೇಳ್ತಾ ಇರ್ಲಿಲ್ಲ, ಇವತ್ತೆ ಆಗಬೇಕು. ಆಗ್ಲೀ ಅಂತ ಚೆಕ್ ಮಾಡಾಕ ...