Posts

Showing posts from 2026

ನಿಮ್ಮ ನಿವೃತ್ತಿ ಜೀವನ ಶುಭಕರವಾಗಲಿ ಮೇಡಂ

Image
ಅಪರೂಪದ ಅಪರಂಜಿ: ಸೇವೆ ಮತ್ತು ಸೌಜನ್ಯದ  ಮೂರ್ತಿ ಶ್ರೀಮತಿ ಸುರಯ್ಯಾ ಬೇಗಂ ಮೇಡಂ  "ಶಿಸ್ತಿನಲಿ ಶಿವ, ಪ್ರೀತಿಯಲಿ ತಾಯಿ, ಜ್ಞಾನದಲಿ ಸರಸ್ವತಿ, ಸೇವೆಯಲಿ ಗಂಗೆಯ ಹರಿವು. ಸುರಯ್ಯಾ ಮೇಡಂ ಎಂಬ ಹೆಸರು ಕೇಳಿದಾಗ, ಮನದಲ್ಲಿ ಮೂಡುವುದು ಗೌರವ, ಕೃತಜ್ಞತೆ ಮತ್ತು ಮಮತೆಯ ಪರಿಮಳವು."  ​ಶಿಕ್ಷಣ ಕ್ಷೇತ್ರ ಎನ್ನುವುದು ಕೇವಲ ಅಕ್ಷರ ಕಲಿಸುವ ಕಾಯಕವಲ್ಲ; ಅದು ಜ್ಞಾನದ ಜೊತೆಗೆ ಸಂಸ್ಕಾರವನ್ನು ಬಿತ್ತಿ, ಬದುಕನ್ನು ರೂಪಿಸುವ ಪವಿತ್ರ ತಪಸ್ಸು. ಇಂತಹ ತಪಸ್ಸಿನಲ್ಲಿ ತಮ್ಮ ಇಡೀ ಜೀವನವನ್ನು ಸವೆಸಿ, ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಲ್ಪಿಯಾಗಿ, ಸಹೋದ್ಯೋಗಿ ಶಿಕ್ಷಕರಿಗೆ ದಾರಿದೀಪವಾಗಿ ನಿಂತವರು ಆದರ್ಶ ಪ್ರಾಂಶುಪಾಲರಾದ ಶ್ರೀಮತಿ ಸುರಯ್ಯಾ ಬೇಗಂ ಹಾದಿಮನಿ ಮೇಡಂ. ಕೆಲವು ವ್ಯಕ್ತಿಗಳು ತಾವು ಅಲಂಕರಿಸಿದ ಹುದ್ದೆಯಿಂದ ದೊಡ್ಡವರಾಗುತ್ತಾರೆ, ಆದರೆ ಮೇಡಂ ಅವರು ತಮ್ಮ ಹೃದಯದ ವಿಶಾಲತೆಯಿಂದ ಆ ಹುದ್ದೆಗೆ ಹೆಮ್ಮೆಯನ್ನು ತಂದುಕೊಟ್ಟವರು. ​2013ನೇ ವರ್ಷ ನನ್ನ ವೃತ್ತಜೀವನದ ಪ್ರಮುಖ ತಿರುವು. ನಾನು ಶಹಾಪುರಕ್ಕೆ ವರ್ಗಾವಣೆಯಾಗಿ ಬಂದಾಗ ಹೊಸ ವಾತಾವರಣದ ಆತಂಕ ನನಗಿತ್ತು. ಅದಕ್ಕಿಂತ ಹೆಚ್ಚಾಗಿ, "ನೀನು ಸುರಯ್ಯಾ ಮೇಡಂ ಅವರ ಶಾಲೆಗೆ ಹೋಗುತ್ತಿದ್ದೀಯ, ಅವರು ತುಂಬಾ ಸ್ಟ್ರಿಕ್ಟ್, ಹುಷಾರು!" ಎಂದು ಹಲವರು ಹೆದರಿಸಿದ್ದರು. ಹಾಗಾಗಿ ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಒಂದು ಭಿನ್ನವಾದ, ಕಠಿಣ ಆಡಳಿತಗಾರ್ತಿಯ ಕಲ್ಪನೆ ಇತ್ತು. ​...

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ನೂರಕ್ಕೆ ನೂರು ಫಲಿತಾಂಶ; 24 ವಿದ್ಯಾರ್ಥಿನಿಯರಿಗೆ ಅತ್ಯುನ್ನತ ಶ್ರೇಣಿ

Image
ಅಲಮೇಲ: ಸ್ಥಳೀಯ ತಾಲೂಕಿನ ವಿಭೂತಿಹಳ್ಳಿಯ ಸರಕಾರಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ದಾಖಲಿಸಿ ಅಭೂತಪೂರ್ವ ಸಾಧನೆ ಮಾಡಿದೆ. ಶಾಲೆಯ ಒಟ್ಟು 24 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ (Distinction) ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ​ ಪದ್ಮಾವತಿ ತಳಕೇರಿ : 625ಕ್ಕೆ 608 ಅಂಕಗಳನ್ನು (ಶೇ. 97.28) ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪೂಜಾ ನೈಕೋಡಿ: 606 ಅಂಕ (ಶೇ. 97.00) ಪಡೆದು ದ್ವಿತೀಯ ಸ್ಥಾನ. ​ಭಾಗ್ಯಲಕ್ಷ್ಮಿ ಬಂಡಗಾರ: 602 ಅಂಕ (ಶೇ. 96.32) ಪಡೆದು ತೃತೀಯ ಸ್ಥಾನ. ​ವೇದಾಂತಿ ಹಿಕ್ಕನಗುತ್ತಿ: 600 ಅಂಕ (ಶೇ. 96.00) ಗಳಿಸಿ ಶ್ಲಾಘನೀಯ ಸಾಧನೆ ಮಾಡಿದ್ದಾರೆ. ವಿಷಯವಾರು ನೂರಕ್ಕೆ ನೂರು ಅಂಕಗಳು: ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿನಿಯರು ಗರಿಷ್ಠ ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ: ​ ಹಿಂದಿ: ಒಟ್ಟು 10 ವಿದ್ಯಾರ್ಥಿನಿಯರು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ​ಕನ್ನಡ: ಇಬ್ಬರು ವಿದ್ಯಾರ್ಥಿನಿಯರು 100ಕ್ಕೆ 100 ಅಂಕ ಪಡೆದಿದ್ದಾರೆ. ​ಸಮಾಜ ವಿಜ್ಞಾನ: ಇಬ್ಬರು ವಿದ್ಯಾರ್ಥಿನಿಯರು 100ಕ್ಕೆ 100 ಅಂಕಗಳನ್ನು ಸಾಧಿಸಿದ್ದಾರೆ. ವಿದ್ಯಾರ್ಥಿನಿಯರ ಈ ಅಮೋಘ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಪಾಟೀಲ್, ಹಿಂದಿ ಶಿಕ್ಷಕರಾದ ಬಸವರಾಜ ಭೂತಿ, ಕನ್ನಡ ಶಿಕ್...

ರಾಜ್ಯದ್ಯಂತ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಶುಭವಾಗಲಿ

Image
Facebook .  instagram ಶಾಲಾ ಜೀವನದ ಒಂದು ಭಾವಯಾನ          ಇಂದು ನಮ್ಮ ಶಾಲೆಯ ಅಂಗಳದಲ್ಲಿ ಒಂದು ವಿಶಿಷ್ಟ ಮೌನ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ. ಐದು ವರ್ಷಗಳ ಹಿಂದೆ, ಅಮ್ಮನ ಸೆರಗು ಹಿಡಿದು, ಕಣ್ಣೀರು ಹಾಕುತ್ತಾ ನಮ್ಮ ಶಾಲೆಗೆ ಬಂದ ಪುಟ್ಟ ಮಕ್ಕಳು ಇಂದು ಆತ್ಮವಿಶ್ವಾಸದ ಮೂರ್ತಿಗಳಾಗಿ ಪರೀಕ್ಷಾ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ. ​ ​"ಬರಿಗೈಲಿ ಬಂದು ಇಂದು ಸಾಧನೆಯ ಶಿಖರ ಏರಲು ಸನ್ನದ್ಧವಾಗಿವೆ. ಜ್ಞಾನದ ಸುಂದರ ಮೂರ್ತಿಗಳಾಗಿ ಕಂಗೊಳಿಸುತ್ತಿವೆ. ಇದೆ ಶಿಕ್ಷಕನ ಬದುಕಿನ ಧನ್ಯತಾ ಭಾವ." ​ನಮ್ಮ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೇವಲ ಕಟ್ಟಡವಲ್ಲ; ಇದು ಸಾವಿರಾರು ಹೆಣ್ಣುಮಕ್ಕಳ ಕನಸುಗಳ ತಾಣ. 6ನೇ ತರಗತಿಗೆ ಬಂದಾಗ ಮನೆ ನೆನಪಿನಲ್ಲಿ ಜಪ್ಪಿಟ್ಟು ಕುಳಿತ ಆ ಮುಗ್ಧ ಮುಖಗಳು ಈಗಲೂ ಕಣ್ಣ ಮುಂದೆ ಇವೆ. ಅಂದು ನಾವು ಅವರಿಗೆ ಕೇವಲ ಪಾಠ ಹೇಳಿಕೊಡದೆ, ಅಮ್ಮನ ಪ್ರೀತಿ, ಅಪ್ಪನ ಧೈರ್ಯ ಮತ್ತು ಅಕ್ಕರೆ ನೀಡಿ. ಆ ಪುಟ್ಟ ಹಕ್ಕಿಗಳಿಗೆ ಇಂದು ಜ್ಞಾನದ ರೆಕ್ಕೆ ಮೂಡಿಸಿ, ಬಾನ ಎತ್ತರಕ್ಕೆ ಹಾರಲು ಸಜ್ಜುಗೊಳಿಸಿದೇವು. "​KREIS" ಸಂಸ್ಥೆಯ "ಪ್ರತಿಭೆಗೆ ಪುರಸ್ಕಾರ" ಎಂಬ ದ್ಯೇಯ ವ್ಯಾಕ್ಯದಂತೆ, ವಿಭೂತಿಹಳ್ಳಿಯ ಈ ಮಣ್ಣಿನಲ್ಲಿ ನಾವು ನಿಮ್ಮ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿ. ಶಿಕ್ಷಕ ವೃಂದ ರಾತ್ರಿ-ಹಗಲೆನ್ನದೆ ನಿಮ್ಮ ಏಳಿಗೆಗಾಗಿ ಶ್ರಮಿಸಿತು. ನಾವು ಮಾಡಿದ ಪಾಠ ಮತ್ತು ವಿಶೇ...

ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ವೈಭವವಾಗಿ ನೆರವೇರಿತು.

Image
ವಿಭೂತಿಹಳ್ಳಿ (ಆಲಮೇಲ), ಫೆ. 18, 2026:  ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ವಿಭೂತಿಹಳ್ಳಿ (ತಾ. ಆಲಮೇಲ) ಇಲ್ಲಿ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭವು ಬುಧವಾರ ಮಧ್ಯಾಹ್ನ 3.00 ಗಂಟೆಗೆ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಷ. ಬ್ರ. ಆನಂದಲಿಂಗ ಶಿವಾಚಾರ್ಯರು, ಶ್ರೀ ಮಲ್ಲಿಕಾರ್ಜುನ ಗವಿಮಠ, ಮಾರ್ಸನಹಳ್ಳಿ ವಹಿಸಿದ್ದರು. ಉದ್ಘಾಟಕರಾಗಿ ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ಸಿ. ಎಂ. ಬಂಡಗಾರ ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮನ್ವಯಾಧಿಕಾರಿಗಳಾದ ಶ್ರೀ ರವೀಂದ್ರ ಬಂತನಾಳ ಉಪಸ್ಥಿತರಿದ್ದರು. ಕಾರ್ಯಕ್ರಮವು 9ನೇ ತರಗತಿ ವಿದ್ಯಾರ್ಥಿನಿಯರಿಂದ  ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು.  ಬಳಿಕ ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ ಮನಮೋಹಕವಾಗಿ ಮೂಡಿಬಂದಿತು. ಕಾರ್ಯಕ್ರಮವನ್ನು ಶಾಲೆಯ ಹಿಂದಿ ಶಿಕ್ಷಕರಾದ ಶ್ರೀ ಬಸವರಾಜ ಭೂತಿ ಅವರು ಸೊಗಸಾಗಿ ನಿರೂಪಿಸಿದರು. ಕನ್ನಡ ಶಿಕ್ಷಕರಾದ ಶ್ರೀ ಧರೆಪ್ಪ ಬಿರಾದಾರ ಸ್ವಾಗತ ಭಾಷಣ ಮಾಡಿದರು.  ಶಾಲೆಯ ವಾರ್ಷಿಕ ವರದಿಯನ್ನು ಶಿಕ್ಷಕಿ ಶ್ರೀಮತಿ ರೂಪಾ...