Posts

Showing posts from August, 2025

ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿಲ್ಲಾ ಉಪ ನಿರ್ದೇಶಕರಿಂದ ಗೌರವಯುತ ಭೇಟಿ: ವಿದ್ಯಾರ್ಥಿನಿಯರಿಗೆ ಪ್ರೇರಣೆ

Image
  ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿಲ್ಲಾ ಉಪ ನಿರ್ದೇಶಕರಿಂದ ಗೌರವಯುತ ಭೇಟಿ: ವಿದ್ಯಾರ್ಥಿನಿಯರಿಗೆ ಪ್ರೇರಣೆ ಆ ಲಮೆಲ, (ಆಗಸ್ಟ್ 25): ಇಲ್ಲಿನ ವಿಭೂತಿಹಳ್ಳಿಯ  ಕಿತ್ತೂರ ರಾಣಿ ವಸತಿ ಶಾಲೆಗೆ ಮಾನ್ಯ ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ಮಹೇಶ್ ಪೂದ್ದಾರ್ ಸಾಹೇಬರು ಇಂದು ಸಾಯಂಕಾಲ ಗೌರವಯುತವಾಗಿ ಭೇಟಿ ನೀಡಿ, ವಿದ್ಯಾರ್ಥಿನಿಯರ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಅವರ ಜೊತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಯಾದ ಶ್ರೀಮತಿ ಭವಾನಿ ಪಾಟೀಲ್ ಮೇಡಂ ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾನ್ಯ ಸಾಹೇಬರು ವಿದ್ಯಾರ್ಥಿನಿಯರೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿದರು. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ವಿಶೇಷವಾಗಿ, ವಿದ್ಯಾರ್ಥಿನಿಯರ ಮನೋಬಲ ಹೆಚ್ಚಿಸಲು ಮತ್ತು ಹೋರಾಟದ ನೋಭಾವವನ್ನು ಬೆಳೆಸಲು, ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ವರಚಿತ ಹಾಡುಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಮಕ್ಕಳಿಗೆ ಸ್ಫೂರ್ತಿ ತುಂಬಿದರು. ಶಿಕ್ಷಣದ ಮಹತ್ವ, ಪರಿಶ್ರಮ ಮತ್ತು ಸಮಾಜ ಸೇವೆಯ ಮೌಲ್ಯಗಳ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡಿದರು. ಶಿಕ್ಷಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಬದ್ಧತೆ, ಹೊಣೆಗಾರಿಕೆ ಮತ್ತು ನೈತಿಕ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು. ಶಾಲೆಯ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಸಲಹೆಗಳನ್ನು ನೀಡಿದ...
Image
  “ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣದೆತ್ತ ಸಂಬಂಧವಯ್ಯಾ!” ಎಂಬ ಗೀತೆ ಮನದಲ್ಲಿ ಮೂಡಿದಾಗಲೆಲ್ಲಾ, ನನಗೆ ಒಂದು ವರ್ಷದ ಹಿಂದಿನ ನೆನಪುಗಳು ಹಸಿರು ಹಸಿರಾಗಿ ಎದುರಿಗೆ ಬರುತ್ತವೆ. ಈ ಶಾಲೆಗೆ ವರ್ಗಾವಣೆಯಾಗಿ ಬಂದು ಇವತ್ತು ನಿಖರವಾಗಿ ಒಂದು ವರ್ಷ. ಹೊಸ ಪರಿಸರ, ಹೊಸ ಮುಖಗಳು, ಹೊಸ ಅನುಭವಗಳು. ಕಾಲಕ್ಕೆ ತಕ್ಕಂತೆ ಇಲ್ಲಿ ಹೊಂದಿಕೊಂಡು ಈ ವಾತಾವರಣದಲ್ಲಿ ಪ್ರೀತಿಯನ್ನು ಸಂಪಾದಿಸಿ ವೃತ್ತಿ ಆರಂಭಿಸಿದ್ದೇನೆ. ಆದರೂ, ಹಳೆಯ ಶಾಲೆಯ ನೆನಪು ಹೃದಯದ ತುದಿಯಲ್ಲಿ ಉಳಿದಿದೆ. ಆ ನೆನಪುಗಳು ಕಾಲದ ಹೊಗೆಯಲ್ಲಿ ಮಾಸದೆ, ಪ್ರತಿದಿನವೂ ನನ್ನನ್ನು ಕಾಡುತ್ತವೆ. ಹಿಂದೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ನಿಲಯಪಾಲಕಿ ಶ್ರೀಮತಿ ಬಸಮ್ಮ ತಂಗಿ, ನೂರಾರು ಕಿಲೋಮೀಟರ್ ದೂರದಿಂದ ಒಂದು ದಿನ ಬಂದು ನನ್ನ ಮನೆ ಬಾಗಿಲಲ್ಲಿ ನಿಂತಳು. ಕೈಯಲ್ಲಿ ತುಂಬು ಬಟ್ಟೆಗಳ ಚೀಲ, ಮುಖದಲ್ಲಿ ತಂಗಿಯ ನಗು, ಹೃದಯದಲ್ಲಿ ಪ್ರೀತಿಯ ಹರಿವು. ಅವಳು ಬಂದು ನನ್ನ ಕೈಗೆ ರಾಖಿಯ ದಾರವನ್ನು ಕಟ್ಟಿದ ಕ್ಷಣದಲ್ಲಿ, ನನ್ನ ಕಣ್ಣು ಕಣ್ಣೀರು ತುಂಬಿ ಮಸಕಾಯಿತು. ಅವಳು ಮಾತಿಲ್ಲದೆ ಹೇಳಿದ ಸತ್ಯವೆಂದರೆ— “ಸಹೋದರ, ನಿನ್ನ ಮೇಲಿನ ನನ್ನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ.” ಆ ದಿನ ನನಗೆ ತಂಗಿಯ ಮಮತೆಯೇ ಸಿಕ್ಕಿತು. ರಕ್ತಸಂಬಂಧವಿಲ್ಲದಿದ್ದರೂ, ಹೃದಯಸಂಬಂಧ ಎಷ್ಟು ಆಳವಾಗಿರಬಹುದು ಎಂಬುದನ್ನು ಅವಳು ತೋರಿಸಿದಳು. ಇನ್ನೊಂದೆಡೆ, ನನ್ನ ಬದುಕಿಗೆ ಅಕ್ಕನ ಸ್ಥಾನ ಪಡೆದವರು ಶ್ರೀಮತಿ...