ಬರದ ಬರೆ
ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ, ಬಸ್ಸತ್ತಿ ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬತ್ತದ ಕಟಾವು ಜೋರಾಗಿಯೇ ನಡೆದಿತ್ತು. ಅಲ್ಪ ಸ್ವಲ್ಪ ಕಾಲುವೆ ನೀರಾವರಿ ಆಶ್ರಿತ ಹತ್ತಿ ಗಿಡಗಳು ಕೆಲವೆಡೆ ಒಡೆದು ನಿಂತು, ಬೆಳ್ಳಿ ಮೋಡದಂತೆ ಅರಳಿ ಕಂಗೊಳಿಸುತಿದ್ದರು ಅವುಗಳಿಗೆ ಈ ವರ್ಷದ ಮಾರ್ಕೆಟ್ ನಲ್ಲಿ ಬೆಲೆಯಿಲ್ಲ. ತೊಗರಿ ಬೆಳೆಗೆ ಮಾರ್ಕೆಟ್ ನಲ್ಲಿ ಬೆಲೆಯಿದ್ದರೂ ಜೂಮ್ ಹಾಕಿ ನೋಡಿದರು ಈ ವರ್ಷ ಕಾಯಿ ಬಿಟ್ಟಿಲ್ಲ. ಒಣ ಬೇಸಾಯದ ಮಳೆ ಅವಲಂಬಿತ ಕೆಲವು ಬೆಳೆಗಳು ಮಳೆ ಇರದೆ, ನೆಲದಿಂದ ಮೇಲೆಳಲಾಗದೆ ರೋಗ ಹತ್ತಿ, ಕುರುಚಲು ಒಡೆದು, ಬಾಯಾರಿ ಒಣಗಿ ನಿಂತಿವೆ. ಯಾದಗಿರಿ ಜಿಲ್ಲೆಯ ಗಡಿ ದಾಟಿ, ವಿಜಯಪುರ ಜಿಲ್ಲಾ ಗಡಿಯೊಳಗೆ ಕಾಲಿಡುತ್ತಿದ್ದಂತೆಯೆ ನೆಟೆಯೊಡೆದು ನಿಂತ ಹೊಲಗದ್ದೆಗಳು ಇನ್ನೂ ಹೆಚ್ಚಾಗಿಯೇ ಕಾಣುತ್ತಿದ್ದವು. ವಿಜಯಪುರ ಜಿಲ್ಲೆಯಲ್ಲಿ ಹೆಸರಿಗೆ ಪಂಚ ನದಿಗಳು ಹರಿದರು ಅದರ ಸವಲತ್ತು ರೈತರಿಗೆ ದೊರಕದು. 500, 700 ಅಡಿಗಳಷ್ಟು ಬೋರ್ವೆಲ್ ಕೊರೆದರು ನೀರು ಬೀಳದೆ ಅತಿ ಹೆಚ್ಚು ರೈತರು ಒಣ ಬೇಸಾಯವೆ ಅವಲಂಬಿಸಿದ್ದಾರೆ. ಮಳೆಯ ಮೇಲೆಯೇ ನಂಬಿಕೆಯಿಟ್ಟು ಬದುಕು ಸಾಗಿಸುತ್ತಾರೆ. ಬರಗಾಲ ಬಿದ್ದರೆ ಅಲ್ಲಿ ಇಲ್ಲಿ ಸಾಲ ಮಾಡಿ, ಮಹಾರಾಷ್ಟ್ರಕ್ಕೆ ಗುಳೆ ಹೋಗುವ ರೈತರ ಪರಿಸ್ಥಿತಿ ಕಂಡು ಮನಸ್ಸಿಗೆ ಸ್ವಲ್ಪ ಕಸಿವಿಸಿ ...