- Get link
- X
- Other Apps
KRCRS ಶಾಲೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ.
ಅಲ್ಮೆಲ್ ತಾಲೂಕಿನ ವಿಭೂತಿಹಳ್ಳಿ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಸಿಂದಗಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಲ್ಮೆಲ್ ತಾಲೂಕಿನ ವಿಭೂತಿಹಳ್ಳಿ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ ಬಾಲಕಿಯರ ತಂಡ ಫೈನಲ್ ಪಂದ್ಯದಲ್ಲಿ ತಮ್ಮ ಕ್ರೀಡಾ ಕೌಶಲ್ಯ, ಕಸರತ್ತಿನೊಂದಿಗೆ ಹೊಂದಾಣಿಕೆಯುತ, ರೋಚಕ ರೀತಿಯಲ್ಲಿ ಆಟವನ್ನಾಡಿ ಗೆಲುವು ಸಾಧಿಸಿದೆ. ಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಪ್ರವೇಶ ಪಡೆದಿದೆ.
ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಈ ತಂಡಕ್ಕೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಭಾಕರ್ ಪಾಟೀಲ್, ದೈಹಿಕ ಶಿಕ್ಷಕರಾದ ಈಶ್ವರ್ ಬಿರಾದಾರ ಟೀಮ್ ಮ್ಯಾನೇಜರ್ ಬಸವರಾಜ್ ಭೂತಿ, ಶ್ರೀ ಧರೆಪ್ಪ ಬಿರಾದಾರ್ ಹಾಗೂ ಶಾಲೆಯ ಸರ್ವ ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಹಾರೈಸಿದ್ದಾರೆ
- Get link
- X
- Other Apps
Comments
Post a Comment