10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿಭೂತಿಹಳ್ಳಿ, ಆಲಮೇಲ ಇದರ 2024-25 ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ದಿನಾಂಕ 17-02-2025 ನೇ ಸೋಮವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ದಿವ್ಯಸಾಹಿತ್ಯ ಷ.ಭ್ರ. ಚಂದ್ರಶೇಖರ್ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಆಲಮೇಲ ಇವರು ವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಭಾಕರ್ ಪಾಟೀಲ್ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಲಮೇಲ ನಗರದ ಸರ್ಕಾರಿ ಆರ್.ಎಂ.ಎಸ್.ಎ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಎಸ್. ಬಿ. ಪಡಶೆಟ್ಟಿ ಯವರು, ಯಾದಗಿರಿ ಜಿಲ್ಲೆಯ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆ ಸೈದಾಪೂರಿನ ಪ್ರಾಂಶುಪಾಲರಾದ ಶ್ರೀ ಶ್ರೀಶೈಲ್ ಕೋರಳ್ಳಿ ಅವರು, ವಸತಿ ಶಾಲೆಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಅಂಬರೀಶ್ ಸಿರಕನಹಳ್ಳಿ, ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಬಟಗಿ, ಡಿ.ಎಸ್ ಪದವಿ ಪೂರ್ವ ಕಾಲೇಜು ಕನ್ನೊಳ್ಳಿಯ ಪ್ರಾಧ್ಯಾಪಕರಾದ ಶ್ರೀ ಎಸ್. ಜಿ ದೇವರಮನಿ, ನಾಗಠಾಣ ಐ. ಜಿ.ಆರ್.ಎಸ್ ವಸತಿ ಶಾಲೆಯ ಆಂಗ್ಲ ಭಾಷೆ ಶಿಕ್ಷಕರಾದ ಭೀಮು ಕೊಪ್ಪದ್, ವಿದ್ಯಾರ್ಥಿ ಪ್ರತಿನಿಧಿಯಾಗಿ ಸುಚಿತ್ರಾ ಬಾವಿಮನಿ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಡಿ. ಬಿ ಬಿರಾದಾರ ಅವರು ನಡೆಸಿಕೊಟ್ಟರು. ಪ್ರಾಸ್ತಾವಿಕ ಹಾಗೂ ವಾರ್ಷಿಕ ವರದಿ ವಚನವನ್ನು ಶ್ರೀ ಬಸವರಾಜ ಭೂತಿಯವರು ಮಾಡಿದರು. ಶ್ರೀಮತಿ ರೂಪಾದೇವಿ ಸಿಗರ್ಕಂಠಿ ಯವರು ಸ್ವಾಗತ ಕೋರಿದರೆ. ಸನ್ಮಾನ ಕಾರ್ಯಕ್ರಮವನ್ನು ಶ್ರೀ ಎ ಜಿ ಬಿರಾದಾರ ನಡೆಸಿದರು. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಶ್ರೀ ಐ.ಜಿ ಬಿರಾದಾರ ರವರು ಮತ್ತು ಶ್ರೀಮತಿ ಅನಿತಾ ಆಸಂಗಿಹಾಳ ನಡೆಸಿಕೊಟ್ಟರು . ಸಂಗೀತ ಶಿಕ್ಷಕರಾದ ಶ್ರೀ ರೇಣುಕಾಚಾರ್ಯ ಗವಾಯಿಗಳು ಹಾಗೂ ವಿಜ್ಞಾನ ಶಿಕ್ಷಕರಾದ ಶ್ರೀ ಎಂ ಎ ಪಿರ್ಜಾದೆ ಸಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಗಣಿತ ಶಿಕ್ಷಕಿಯರಾದ ಶ್ರೀಮತಿ ಎಸ್. ಎ ಶೇಖ್ ಮೇಡಂ, ಚಿತ್ರಕಲಾ ಶಿಕ್ಷಕರ ಕು. ಜ್ಯೋತಿ ದುರ್ಗಾ, ನರ್ಸಿಂಗ್ ಆಫೀಸರ್ ಆದ ಶ್ರೀಮತಿ ಸುನಿತಾ ಗೇರ್ಡೇ, ನಿಲಯ ಪಾಲಕಿಯರಾದ ಶ್ರೀಮತಿ ಮಾಲತಿ ತಡಲಾಗಿಯವರು ಉಪಸ್ಥಿತರಿದ್ದರು.
Comments
Post a Comment