✨ ಸ್ನೇಹದ ಔತಣ – ಬಸವಕಲ್ಯಾಣ
ಬಸವಣ್ಣನ ಆಧ್ಯಾತ್ಮಶಕ್ತಿ ತುಂಬಿರುವ ಬಸವಕಲ್ಯಾಣದ ನೆಲಗೆ ಮೊದಲಬಾರಿಗೆ ಕಾಲಿಟ್ಟೆವು. ಅಲ್ಲಿನ ಗಾಳಿಯೇ ಬೇರೆ — ಪ್ರತಿ ಹೆಜ್ಜೆಯೂ ಇತಿಹಾಸದ ಸ್ಪರ್ಶ, ಶರಣರ ಅನುಭವಗಳ ನಾಡಿದಂತಿತ್ತು.
ಅಂಥವೇಳೆಯಲ್ಲಿ, ಆಗ ತಾನೇ ವರ್ಗಾವಣೆಯಾಗಿ ಅಲ್ಲಿಗೆ ಬಂದಿದ್ದ ಆತ್ಮೀಯ ಸ್ನೇಹಿತ ಇಸ್ಮಾಯಿಲ್, ತಮ್ಮ ದಂಪತಿಗಳೊಂದಿಗೆ, ಇಡೀ ಮನಸ್ಸಿನಿಂದ, ನಿಜವಾದ ಅತಿಥಿ ಸಂಸ್ಕೃತಿಯನ್ನು ತೋರಿಸಿದರು.
ಅವರ ಮನೆಯಲ್ಲಿ ಪಡೆದ ಔತಣವಷ್ಟೇ ಅಲ್ಲ, ಅದು ಸ್ನೇಹ, ಗೌರವ, ಆತ್ಮೀಯತೆ, ಭಾವನಾತ್ಮಕ ಸಂಪರ್ಕ ಇವನ್ನೆಲ್ಲಾ ಒಟ್ಟಾಗಿ ಹೊತ್ತು ತಂದಿದ್ದ ಭೋಜನ.
ನಾನು, ರಂಗು, ಸಂತು ಮತ್ತು ಶಿವು ಸರ್ ಜೊತೆ, ಮೌನಕ್ಕೂ ಮಾತಿಗೂ ಮಧ್ಯದಲ್ಲಿ ಮಿಡಿಯುತ್ತಿದ್ದ ಒಂದು ನಿಜವಾದ ಅನುಭವ… ಹಾಸ್ಯ ಚಟಾಕೆಗಳ ಮಧ್ಯೆ ಎದೆ ತುಂಬಿದ ಭಾವನೆ, ಹಸಿವಿನ ಹಿಂದೆ ಮೌಲ್ಯದ ಸ್ನೇಹ.
ತಟ್ಟೆಯಲ್ಲಿ ಎಷ್ಟು ಅಡುಗೆ ಇದ್ದಿತ್ತೋ ಅವವರೆಗೂ, ಅದಕ್ಕಿಂತಲೂ ಹೆಚ್ಚು ಅವರ ಆತ್ಮದ ಆತಿಥ್ಯ, ಅವರ ನಗು, ಅವರ ಸೌಜನ್ಯಅವನು ನೀಡಿದ್ದು ಆಹಾರವಲ್ಲ, ಒಂದು ದಿನವನ್ನೇ ನೆನಪಾಗಿ ಉಳಿಯುವಷ್ಟು ಪ್ರೀತಿಯ ಉಡುಗೊರೆ.
ಔತಣ ಮುಗಿದ ನಂತರ, ಅವರು ಧರ್ಮದಿಂದ ದೂರವಿದ್ದು, ಮಾನವೀಯತೆಯ ದಾರಿಯಲ್ಲೇ ನಮ್ಮ ಜೊತೆ ನಡೆದರು — ಬಸವಣ್ಣನ ಶರಣ ಸಂಸ್ಕೃತಿಯ ಬಗ್ಗೆ ತಿಳಿಸುತ್ತಾ, ಪ್ರತಿ ಪವಿತ್ರ ತಾಣವನ್ನು ತಾವು ತಿಳಿದಷ್ಟು ಎಳೆ ಎಳೆಯಾಗಿ ಹಂಚಿಕೊಂಡರು.
ನಾವು ಬಸ್ ನಿಲ್ದಾಣ ಕಾಲಿಡುವ ಹೊತ್ತಿನಲ್ಲಿ,ಅವರು ನಮ್ಮ ಜೊತೆ ಬಸ್ ನಿಲ್ದಾಣದವರೆಗೆ ನಡೆದುಬಂದು, ಅಕ್ಷರಶಃ ನಮ್ಮನ್ನು ಬೀಳ್ಕೊಡಲು ಕಾಲು ಕಿತ್ತು ಸ್ನೇಹದ ಕಣ್ಣು ಹನಿಗಳನ್ನು ಮಡಚಿದ ನಗುಮುಖದಲ್ಲಿ ಹಂಚಿಕೊಂಡರು.
Comments
Post a Comment